ಬೇಕಾಗುವ ಸಾಮಾಗ್ರಿಗಳು:
ಮೈದಾ – 1 ಕಪ್, ಸಕ್ಕರೆ – 2 ಕಪ್, ತುಪ್ಪ – ಸ್ವಲ್ಪ, ಏಲಕ್ಕಿ- ಚಿಟಿಕೆ, ನಿಂಬೆರಸ – 1.5 ಟೀ ಸ್ಪೂನ್, ಅಡುಗೆ ಸೋಡಾ – ಸ್ವಲ್ಪ, ಕರಿಯಲು ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ ಸಕ್ಕರೆ ಪಾಕ ಮಾಡಿಕೊಳ್ಳಿ. 2 ಕಪ್ ಸಕ್ಕರೆಗೆ ಒಂದು ಕಪ್ ನೀರು ಹಾಕಿ ಒಂದೆಳೆ ಪಾಕ ಮಾಡಿಕೊಳ್ಳಬೇಕು. ಬಳಿಕ ಫುಡ್ ಕಲರ್ ಹಾಕಿ. ಸ್ಟೌ ಆಫ್ ಮಾಡಿದ ಬಳಿಕ ಸಕ್ಕರೆ ಪಾಕಕ್ಕೆ ಸ್ವಲ್ಪ ನಿಂಬೆರಸ ಹಾಕಿ. ಬಳಿಕ ಏಲಕ್ಕಿ ಪುಡಿಯನ್ನು ಹಾಕಿ ಮುಚ್ಚಿಡಿ.
ಬಳಿಕ ಇನ್ನೊಂದು ಪಾತ್ರೆಗೆ ಮೈದಾ ಹಾಕಿ ಅದಕ್ಕೆ ನೀರು ಹಾಕಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪನೇ ನೀರು ಹಾಕಿ ಕಲಸಿಕೊಳ್ಳಿ. ಹಿಟ್ಟು ತುಂಬಾ ತೆಳ್ಳವೂ ಅಲ್ಲದೆ ದಪ್ಪವೂ ಅಲ್ಲದೆ ಚೆನ್ನಾಗಿ ಕಲಸಿಕೊಳ್ಳಿ. ದೋಸೆ ಹಿಟ್ಟಿನ ಹದಕ್ಕಿಂತ ಸ್ವಲ್ಪ ದಪ್ಪವಿರಲಿ. ಬಳಿಕ ಒಂದು ಸ್ಪೂನ್ ನಿಂಬೆರಸ, ಸ್ವಲ್ಪ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ಜಿಲೇಬಿ ಮಾಡಲು ಹಾಲಿನ ಕವರ್ ಇಲ್ಲವೇ ಬಾಟಲಿಯನ್ನು ಉಪಯೋಗಿಸಬಹುದು. ಸ್ಟೌನಲ್ಲಿ ಬಾಣಲೆ ಇಟ್ಟು, ಎಣ್ಣೆ ಬಿಸಿಯಾಗಲು ಇಡಿ.
ನಂತರ ಬಾಟಲಿಗೆ ಈ ಮಿಶ್ರಣವನ್ನು ಹಾಕಿ, ಎಣ್ಣೆ ಬಿಸಿಯಾದಾಗ ಬಾಟಲಿಯಲ್ಲಿ ನಿಧಾನಕ್ಕೆ ರೌಂಡ್ ಆಕಾರದಲ್ಲಿ ಬಿಡಿ. ಎರಡೂ ಕಡೆ ಚೆನ್ನಾಗಿ ಕಾಯಿಸಿ. ನಂತರ ಇದನ್ನು ಸಕ್ಕರೆ ಪಾಕಕ್ಕೆ ಹಾಕಿ ಮುಳುಗಿಸಿ ಸರ್ವಿಂಗ್ ಪ್ಲೇಟ್ ಗೆ ಎತ್ತಿಟ್ಟರೆ ಸವಿಯಲು ರುಚಿಯಾದ ಜಿಲೇಬಿ ರೆಡಿ.
PublicNext
07/08/2021 03:23 pm