ಬೇಕಾಗುವ ಸಾಮಾಗ್ರಿಗಳು: ಬದನೆಕಾಯಿ – 3 ರಿಂದ 4, ಹುಣಸೆಹಣ್ಣು – ಒಂದು ನಿಂಬೆಹಣ್ಣು ಗಾತ್ರದಷ್ಟು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ, ಎಣ್ಣೆ – 5 ಟೀ ಸ್ಪೂನ್, ಒಣಮೆಣಸಿನಕಾಯಿ -2, ಬೆಳ್ಳುಳ್ಳಿ – 2 ಎಸಳು, ಸಾಸಿವೆ – ಸ್ವಲ್ಪ, ಉದ್ದಿನಬೇಳೆ – ಸ್ವಲ್ಪ, ಕಡಲೇಬೇಳೆ – ಸ್ವಲ್ಪ, ಕರಿಬೇವುಸೊಪ್ಪು, ಹಸಿಮೆಣಸಿನಕಾಯಿ – 4, ಈರುಳ್ಳಿ – 1
ಮಾಡುವ ವಿಧಾನ: ಬದನೆಕಾಯಿಯನ್ನು ಸ್ಟೌ ಮೇಲಿಟ್ಟು ಸುಡಬೇಕು. ಸ್ವಲ್ಪ ತಣಿದ ಬಳಿಕ ಸಿಪ್ಪೆ ತೆಗೆಯಿರಿ. ಬಳಿಕ ಸ್ಮ್ಯಾಶ್ ಮಾಡಿಕೊಳ್ಳಬೇಕು. ಒಂದು ನಿಂಬೆಹಣ್ಣಿನ ಗಾತ್ರದಷ್ಟು ಹುಣಸೆಹಣ್ಣನ್ನು ಒಂದುವರೆ ಗ್ಲಾಸ್ ನೀರಲ್ಲಿ ನೆನೆಸಿ ಹಿಂಡಿ ಒಂದು ಬಾಣಲೆಗೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲ ಹಾಕಿ ಕುದಿಯಲು ಬಿಡಿ.
ಚೆನ್ನಾಗಿ ಕುದಿದ ಬಳಿಕ ಹಿಚುಕಿದ ಬದನೆಕಾಯಿ ಹಾಕಿ ಮಿಕ್ಸ್ ಮಾಡಿ. ಬಳಿಕ ಇನ್ನೊಂದು ಪಾತ್ರೆಯಲ್ಲಿ 5 ಟೀ ಸ್ಪೂನ್ ನಷ್ಟು ಎಣ್ಣೆ, 2 ಒಣಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿ, ಸಾಸಿವೆ, ಉದ್ದಿನಬೇಳೆ, ಕಡಲೇಬೇಳೆ ಹಾಕಿ.
ಸಾಸಿವೆ ಸಿಡಿದಾಗ ಕರಿಬೇವುಸೊಪ್ಪು ಹಾಕಿ. ಹಸಿಮೆಣಸಿನಕಾಯಿ ಹಾಕಿದ ಬಳಿಕ ಹೆಚ್ಚಿಟ್ಟ ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈ ಒಗ್ಗರಣೆಯನ್ನು ಗೊಜ್ಜಿಗೆ ಹಾಕಿ ಮಿಕ್ಸ್ ಮಾಡಿದ್ರೆ ಸವಿಯಲು ಬದನೆಕಾಯಿ ಗೊಜ್ಜು ರೆಡಿ.
PublicNext
05/08/2021 06:42 pm