ಬೇಲ್ ರೆಸಿಪಿ ತಯಾರಿಸುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
* ಮಂಡಕ್ಕಿ – 1 ಬೌಲ್
*ಸೇವ್ – 1 ಬೌಲ್
*ಈರುಳ್ಳಿ – 1
*ಕೊತ್ತಂಬರಿ ಸೊಪ್ಪು
*ಚಿಲ್ಲಿ ಟೊಮೆಟೊ ಸಾಸ್ – 1 ಸ್ಪೂನ್
*ಚಾಟ್ ಮಸಾಲಾ – 1 ಸ್ಪೂನ್
*ಟೊಮೇಟೋ – 1/2
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪು, ಸೇವ್ ಹಾಗೂ ಮಂಡಕ್ಕಿಯನ್ನು ಸೇರಿಸಿ ಮಿಶ್ರಮಾಡಿ.
* ನಂತರ ಚಾಟ್ ಮಸಾಲಾ ಮತ್ತು ಉಪ್ಪನ್ನು ಈ ಮಿಶ್ರಣಕ್ಕೆ ಹಾಕಿ.
* ಒಂದು ಬಾಕ್ಸ್ ಗೆ ಟೊಮೇಟೋ ಕೆಚಪ್, ಹಸಿಮೆಣಸು ಮತ್ತು ಈ ಮೊದಲೇ ತಯಾರಿಸಿದ ಮಂಡಕ್ಕಿ ಮಿಶ್ರಣವನ್ನು ಹಾಕಿ ಬಾಕ್ಸ್ ನ ಮುಚ್ಚಳವನ್ನು ಗಟ್ಟಿಯಾಗಿ ಹಾಕಿ ಮತ್ತು ಚೆನ್ನಾಗಿ ಕುಲುಕಿಸಿದರೆ ರುಚಿಯಾದ ಬೇಲ್ ಪುರಿ ಸವಿಯಲು ಸಿದ್ಧವಾಗುತ್ತದೆ.
PublicNext
03/08/2021 06:23 pm