ಬ್ರೆಡ್ ಸ್ಯಾಂಡ್‌ವಿಚ್‌ಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ. ಸ್ಯಾಂಡ್ವಿಚ್ ಅಲ್ಲದೆ ಬ್ರೆಡ್ ಅನ್ನು ನಾವು ಬ್ರೆಡ್ ಪಾಕೆಟ್ಸ್, ಬ್ರೆಡ್ ಪಿಜ್ಜಾ, ಬ್ರೆಡ್ ಪಕೋಡ ಮುಂತಾದ ತಿನಿಸುಗಳನ್ನು ತಯಾರಿಸಲು ಬಳಸುತ್ತೇವೆ. ಅಷ್ಟೇ ಅಲ್ಲ ಬ್ರೆಡ್ ಪುಡ್ಡಿಂಗ್, ಬ್ರೆಡ್ ಮಸಾಲಾ ಉಪ್ಪಿಟ್ಟು ಹೀಗೆ ಎಷ್ಟೋ ತಿನಿಸುಗಳನ್ನು ಮಾಡಬಹುದು. ಆದರೆ ಇಂದು ನಾನಿಲ್ಲಿ ಬರೆಯುತ್ತಿರುವ ಅಡುಗೆ ವಿಧಾನದಲ್ಲಿ ಬ್ರೆಡ್ ಮತ್ತು ಚೀಸನ್ನು ಪ್ರಮುಖ ಸಾಮಗ್ರಿಗಳನ್ನಾಗಿ ಬಳಸಲಾಗಿದೆ. ಬ್ರೆಡ್ ಮತ್ತು ಚೀಸ್ ಒಂದು ಒಳ್ಳೆಯ ಕಾಂಬಿನೇಶನ್. ಈ ಕಾಂಬಿನೇಷನ್‌ನಲ್ಲಿ ಸಂಜೆ ಚಹಾ ಸಮಯಕ್ಕೆ ಸರಿಯಾಗಿ ಬ್ರೆಡ್ ಒಳಗೆ ಚೀಸ್ ಮಿಶ್ರಣ ತುಂಬಿಸಿ ಅದನ್ನೇ ಒಂದು ಕುರುಕಲು ತಿಂಡಿಯಾಗಿಸಿದರೆ ಮಕ್ಕಳಿಗೆ ಬಿಡಿ, ದೊಡ್ಡವರೂ ಒಂದು ಬೈಟ್ ಟ್ರೈ ಮಾಡೋದಂತೂ ಗ್ಯಾರಂಟೀ! ಮತ್ತೇಕೆ ತಡ,ಹಂತ ಹಂತವಾದ ಚಿತ್ರಣದೊಂದಿಗೆ ಬ್ರೆಡ್ ಚೀಸ್ ಬೈಟ್ಸ್ ಎಂಬ ಒಂದು ಕುರುಕಲು ಸ್ನ್ಯಾಕ್ ಮಾಡುವ ವಿಧಾನ ತಿಳಿಯೋಣ ಬನ್ನಿ.
PublicNext
03/08/2021 06:14 pm