ರಾಗಿ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಇದರಿಂದ ಚರ್ಮದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬೆರೆಸಿ ಬಳಸಿದರೆ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
1 ಸ್ಪೂನ್ ರಾಗಿ ಹಿಟ್ಟಿಗೆ ½ ಸ್ಪೂನ್ ಹಸಿ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ½ ಸ್ಪೂನ್ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಿಸಿ. ಬಳಿಕ ಹಸಿ ಹಾಲಿನಿಂದ ಮುಖವನ್ನು ಸ್ವಚ್ಛಗೊಳಿಸಿ ಮುಖ ಮತ್ತು ಕುತ್ತಿಗೆಗೆ ಈ ಫೇಸ್ ಪ್ಯಾಕ್ ಹಚ್ಚಿ ಕನಿಷ್ಠ 25 ನಿಮಿಷಗಳ ಕಾಲ ಬಿಟ್ಟು ಪ್ಯಾಕ್ ಒಣಗಿದಾಗ ಅದರ ನೀರನ್ನು ಸಿಂಪಡಿಸಿ ಕೈಗಳಿಂದ ವೃತ್ತಾಕಾರವಾಗಿ ಮಸಾಜ್ ಮಾಡಿ ಮುಖವನ್ನು ವಾಶ್ ಮಾಡಿ. ಇದನ್ನು 15 ದಿನಗಳಿಗೊಮ್ಮೆ ಬಳಸಿ.
ಇದು ಸತ್ತ ಚರ್ಮಕೋಶಗಳನ್ನು ತೆಗೆದು ಹಾಕುತ್ತದೆ. ಚರ್ಮಕ್ಕೆ ಹೊಳಪು ನೀಡುತ್ತದೆ. ಮುಖದಲ್ಲಿರುವ ಹೆಚ್ಚುವರಿ ಎಣ್ಣೆ ಹಾಗೂ ಮೊಡವೆ ಸಮಸ್ಯೆಯನ್ನು ನಿವಾರಿಸುತ್ತದೆ. ಚರ್ಮದ ರಂಧ್ರವನ್ನು ಒಳಗಿನಿಂದ ಕ್ಲೀನ್ ಮಾಡುತ್ತದೆ.
PublicNext
28/02/2021 03:07 pm