ಬೇಕಾಗುವ ಪದಾರ್ಥಗಳು..
• ಸ್ವೀಟ್ ಕಾರ್ನ್- 2
• ಜೋಳದ ಹಿಟ್ಟು - 1 ಬಟ್ಟಲು
• ಅಕ್ಕಿ ಹಿಟ್ಟು- 1 ಬಟ್ಟಲು
• ಜೀರಿಗೆ ಪುಡಿ- 1 ಚಮಚ
• ಮೆಣಸಿನ ಪುಡಿ - ಅರ್ಧ ಚಮಚ
• ಬೆಳ್ಳುಳ್ಳು ಪುಡಿ- ಅರ್ಧ ಚಮಚ
• ಆಂಚೂರ್ ಪೌಡರ್ - ಕಾಲು ಚಮಚ
• ಉಪ್ಪು- ರುಚಿಗೆ ತಕ್ಕಷ್ಟು
• ಎಣ್ಣೆ- ಕರಿಯಲು
ಮಾಡುವ ವಿಧಾನ...
• ಮೊದಲಿಗೆ ಜೋಳವನ್ನು ಮಧ್ಯೆ ಕತ್ತರಿಸಿಕೊಂಡು ಟೂತ್ ಪಿಕ್ ಗಳ ಮೂಲಕ ಜೋಳವನ್ನು ಹಾಕಿಕೊಳ್ಳಬೇಕು.
• ನಂತರ ಪಾತ್ರೆಯೊಂದಕ್ಕೆ ನೀರು ಹಾಗೂ ಜೋಳವನು ಟೂತ್ ಪಿಕ್ ಗಳ ಜೊತೆಗೆಯೇ ಬೇಯಿಸಿಕೊಳ್ಳಬೇಕು.
• ಬಳಿಕ ಬೆಂದ ಜೋಳಕ್ಕೆ ಅಕ್ಕಿ ಹಿಟ್ಟು, ಜೋಳದ ಹಿಟ್ಟು, ಜೀರಿಗೆ ಪುಡಿ, ಮೆಣಸಿನ ಪುಡಿ, ಬೆಳ್ಳುಳ್ಳಿ ಪುಡಿ, ಆಂಚೂರ್ ಪುಡಿ, ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು,
• ಬಳಿಕ ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಜೋಳವನ್ನು ಹಾಕಿ ಕೆಂಪಗೆ ಕರಿದರೆ, ರುಚಿಕರವಾದ ಮಸಾಲಾ ಕಾರ್ನ್ ಫ್ರೈಸ್ ಸವಿಯಲು ಸಿದ್ಧ.
PublicNext
23/02/2021 02:10 pm