ನವದೆಹಲಿ: ಚಳಿಗಾಲದಲ್ಲಿ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಮುಖದ ಅಂದವನ್ನು ಕಾಪಾಡಿಕೊಳ್ಳುವುದು ಹೇಗೆ ಇಲ್ಲಿದೆ ಕೆಲವು ಮಾಹಿತಿ
ಹಾಲಿನ ಕೆನೆ ಬಳಸಿ
ಚಳಿಗಾಲದಲ್ಲಿ ಚರ್ಮ, ತೇವ ಕಳೆದುಕೊಂಡು ಚರ್ಮದಲ್ಲಿ ಒಡಕು ಕಂಡುಬರುತ್ತದೆ, ಹೀಗಾಗಿ ಒಣ ಚರ್ಮವಿರುವವರು ಪ್ರತಿನಿತ್ಯ ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಹೊಳಪನ್ನು ಉಳಿಸಿಕೊಳ್ಳಬಹುದಾಗಿದೆ.
ತೆಂಗಿನ ಎಣ್ಣೆ ಬಳಸಿ
ಪ್ರತಿ ನಿತ್ಯ ರಾತ್ರಿ ಮಲಗುವಾಗ ಚೆನ್ನಾಗಿ ಮುಖವನ್ನು ತೊಳೆದು ನೈಸರ್ಗಿಕವಾದ ತೆಂಗಿನ ಎಣ್ಣೆಯಿಂದ ಮೂಖಕ್ಕೆ ಮಸಾಜ್ ಮಾಡುವುದರಿಂದ ಚಳಿಗಾಲದಲ್ಲಿ ಮುಖ ಒಡೆಯುವುದನ್ನು ತಡೆಯಬಹುದಾಗಿದೆ ಮತ್ತು ಮುಖದ ಕಾಂತಿಯನ್ನೂ ಕೂಡಾ ಹೆಚ್ಚಿಸುತ್ತದೆ. ಇದು ಅಂಗಡಿಗಳಲ್ಲಿ ದೊರಕುವ ಬಾಡಿ ಲೋಷನ್ ನ ರೀತಿ ಕಾರ್ಯ ನಿರ್ವಹಿಸುತ್ತದೆ.
ಸಾಕಷ್ಟು ನೀರು ಸೇವನೆ
ನೀರಿನ ಸೇವನೆ ದೇಹದ ಪ್ರತಿಯೊಂದು ಭಾಗದ ಆರೋಗ್ಯಕ್ಕೂ ಪೂರಕವಾಗಿದ್ದು, ಮುಖದ ಕಾಂತಿಗೂ ಇದು ಅತೀ ಮುಖ್ಯವಾದದ್ದು. ಚಳಿಗಾಲದಲ್ಲಿ ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ಕುಡಿಯುವುದರಿಂದ ಮುಖದ ಚರ್ಮ ಒಣಗದಂತೆ ನೋಡಿಕೊಳ್ಳಬಹುದಾಗಿದೆ.
ಆಹಾರ ಕ್ರಮ
ಚಳಿಗಾಲದಲ್ಲಿ ಆದಷ್ಟು ಸೊಪ್ಪು,ಹಸಿರು ತರಕಾರಿಗಳು ಮತ್ತು ಮೀನನ್ನು ಸೇವಿಸುವುದು ಉತ್ತಮ. ಚಳಿಗಾಲದಲ್ಲಿ ನೈಸರ್ಗಿಕವಾಗಿ ದೊರಕುವ ಹಣ್ಣುಗಳ ಸೇವನೆಯೂ ಮೂಖದ ಕಾಂತಿ ಕಳೆಗುಂದದಂತೆ ನೋಡಿಕೊಳ್ಳುತ್ತದೆ.
PublicNext
17/02/2021 05:34 pm