ಚಳಿಗಾಲದಲ್ಲಿ ಒಣ ಚರ್ಮದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ನೀವು ಅರಿಶಿನ ಫೇಸ್ ಪ್ಯಾಕ್ ನ್ನು ಬಳಸಬಹುದು. ಇದು ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡುತ್ತದೆ. ಹಾಗಾಗಿ ಇದನ್ನು ತಯಾರಿಸುವುದು ಹೇಗೆಂದು ತಿಳಿಯೋಣ ಬನ್ನಿ.
1 ಚಮಚ ಮೊಸರಿಗೆ ½ ಚಮಚ ಅರಶಿನ ಪುಡಿ, 1 ಚಮಚ ನಿಂಬೆ ರಸ ಸೇರಿಸಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 30 ನಿಮಿಷಗಳ ಬಳಿಕ ಮುಖವನ್ನು ಸ್ವಚ್ಚಗೊಳಿಸಿ. ಇದನ್ನು ವಾರಕ್ಕೆ 2 ಬಾರಿ ಬಳಸಿ. ಇದು ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡುತ್ತದೆ.
1 ಮೊಟ್ಟೆಯ ಬಿಳಿ ಭಾಗ, ½ ಚಮಚ ಅರಶಿನ, ½ ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತಯಾರಾದ ಪೇಸ್ಟ್ ಅನ್ನು ಬ್ರಷ್ ನ ಸಹಾಯದಿಂದ ಮುಖಕ್ಕೆ ಹಚ್ಚಿ. 30 ನಿಮಿಷದ ಬಳಿಕ ವಾಶ್ ಮಾಡಿ. ಇದನ್ನು ವಾರಕ್ಕೆ 2 ಬಾರಿ ಹಚ್ಚಿ. ಇದು ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತದೆ. ಮನೆಯಲ್ಲೇ ಟ್ರೈ ಮಾಡಿ ಪಾರ್ಲರ್ ಬಿಲ್ ನ್ನು ಸೇವ್ ಮಾಡಿ…
PublicNext
09/02/2021 02:48 pm