ಬೇಕಾಗುವ ಪದಾರ್ಥಗಳು...
ತೆಂಗಿನಕಾಯಿ- ತುರಿದದ್ದು 200 ಗ್ರಾಂ
ಬೆಳ್ಳುಳ್ಳು- 20 ಗ್ರಾಂ
ಶುಂಠಿ- 40 ಗ್ರಾಂ
ಲವಂಗ - 4
ದಾಲ್ಚಿನ್ನಿ - ಇಂಚು
ಅಚ್ಛ ಖಾರದ ಪುಡಿ- 1.5 ಚಮಚ
ದನಿಯಾ ಪುಡಿ- 1.5 ಚಮಚ
ಈರುಳ್ಳಿ- ಉದ್ದಕ್ಕೆ ಹೆಚ್ಚಿದ್ದು 300 ಗ್ರಾಂ
ಟೊಮೆಟೋ- ಕತ್ತರಿಸಿದ್ದು 500 ಗ್ರಾಂ
ಅವರೆಕಾಳು- 1 ಬಟ್ಟಲು
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
ತುಪ್ಪ - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಅಕ್ಕಿ - 1 ಕೆ.ಜಿ
ಮಾಡುವ ವಿಧಾನ...
ಮಿಕ್ಸಿ ಜಾರ್'ಗೆ ತೆಂಗಿನಕಾಯಿ, ಶುಂಠಿ, ಬೆಳ್ಳುಳ್ಳಿ, ಲವಂಗ, ದಾಲ್ಚಿನ್ನಿ, ಅಚ್ಚ ಖಾರದ ಪುಡಿ ಮತ್ತು ದನಿಯಾ ಪುಡಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಈರುಳ್ಳಿ ಬಾಕಿ ಕೆಂಪಗೆ ಹುರಿದುಕೊಳ್ಳಿ. ಟೊಮ್ಯಾಟೊ ಹಾಕಿ ಚೆನ್ನಾಗಿ ಬೇಯಿಸಿ. ಬಳಿಕ ಈಗಾಗಲೇ ರುಬ್ಬಿಟ್ಟುಕೊಂಡ ಪೇಸ್ಟ್, ಉಪ್ಪು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ನಂತರ ಅವರೆಕಾಳುಗಳನ್ನು ಹಾಕಿ 10 ನಿಮಿಷ ಬೇಯಲು ಬಿಡಿ.
ಬಳಿಕ ಅಕ್ಕಿ ಹಾಕಿ 5 ನಿಮಿಷ ಬಿಟ್ಟು, ಅಳತೆಗೆ ತಕ್ಕಷ್ಟು ನೀರು, ಸ್ವಲ್ಪ ತುಪ್ಪ ಹಾಕಿ ಕುಕ್ಕಲ್ ಮುಚ್ಚಳವನ್ನು ಮುಚ್ಚಿ ಮೂರು ಕೂಗು ಕೂಗಿಸಿಕೊಂಡರೆ ರುಚಿಕರವಾದ ಅವರೆಕಾಳು ಬಾತ್ ಸವಿಯಲು ಸಿದ್ಧ.
PublicNext
20/01/2021 03:30 pm