ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮನೆಯಲ್ಲಿಯೇ ಅರಿಶಿನದ ಫೇಸ್ ಪ್ಯಾಕ್ ತಯಾರಿಸಿ ಅಂದ ಹೆಚ್ಚಿಸಿಕೊಳ್ಳಿ

ಸುಂದರವಾಗಿ ಕಾಣಬೇಕು ಎಂಬುದು ಪ್ರತಿಯೊಬ್ಬರ ಕನಸ್ಸು ಹಾಗಂತ ಬ್ಯೂಟಿ ಪಾರ್ಲರ್ ಗಳಿಗೆ ಹಣ ವ್ಯಯ ಮಾಡದಿರಿ ಬದಲಿಗೆ ಮನೆಯಲ್ಲಿಯೇ ಸೌಂದರ್ಯ ಹೆಚ್ಚಿಸಿಕೊಳ್ಳುವ ಬುದ್ದಿ ಉಪಯೋಗಿಸಿ.

ಮಾರುಕಟ್ಟೆಯಲ್ಲಿ ಸಿಗುವ ಪ್ರೊಡಕ್ಟ್ ಗಳು ಎಲ್ಲರಿಗೂ ಹೊಂದುವುದಿಲ್ಲ.

ಒಬ್ಬೊಬ್ಬರ ತ್ವಚೆ ಒಂದೊಂದು ರೀತಿ ಆಗಿರುವುದರಿಂದ ಕೆಲವೊಮ್ಮೆ ಇವುಗಳಿಂದ ಸಮಸ್ಯೆ ಕಂಡು ಬರುತ್ತದೆ.

ಹಾಗಾಗಿ ಮೊದಲಿನಿಂದಲೂ ಅನುಸರಿಸಿಕೊಂಡಿರುವ ಕೆಲವು ಫೇಸ್ ಪ್ಯಾಕ್ ಗಳನ್ನು ಹಚ್ಚುವುದರಿಂದ ತ್ವಚೆಯ ಅಂದ ಹೆಚ್ಚುತ್ತದೆ.

ಅರಿಶಿನ ತ್ವಚೆಯ ಕಾಂತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕಲೆ, ಸುಕ್ಕು ರಹಿತ ಮುಖ ನಿಮ್ಮದಾಗಬೇಕೆಂದರೆ ಈ ವಿಧಾನ ಅನುಸರಿಸಿ ನೋಡಿ.

1 ಟೀ ಸ್ಪೂನ್ ಅರಿಶಿನ ತೆಗೆದುಕೊಂಡು ಅದಕ್ಕೆ 1 ಟೀ ಸ್ಪೂನ್ ಆ್ಯಪಲ್ ಸೈಡ್ ವಿನೇಗರ್, 1 ½ ಟೇಬಲ್ ಸ್ಪೂನ್ ಜೇನುತುಪ್ಪ, 1 ಟೀ ಸ್ಪೂನ್ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹೆಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ.

ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖದ ಅಂದ ಹೆಚ್ಚಾಗುತ್ತದೆ.

Edited By : Nirmala Aralikatti
PublicNext

PublicNext

07/01/2021 02:06 pm

Cinque Terre

19.32 K

Cinque Terre

0