ಟ್ರಕ್ಕಿನಡಿ ಸಿಲುಕಬೇಕಿದ್ದ ತನ್ನ ಕಂದನನ್ನು ಕಾಪಾಡಿದ ತಾಯಿಯ ಕಾರ್ಯ ನೋಡುಗರನ್ನು ಒಂದು ಕ್ಷಣ ಭಯಗೊಳಿಸಿ ಬಿಡುತ್ತದೆ.
ಸದ್ಯ ಈ ಹಳೆಯ ವೀಡಿಯೋವನ್ನು ಇಂಗ್ಲೆಂಡ್ ಕ್ರಿಕೆಟಿಗ ಜೋಫ್ರಾ ಆರ್ಚರ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡ ನಂತರ ಮತ್ತೆ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹೌದು ಒಂದು ಬೈಕ್ ನಲ್ಲಿ ತಂದೆ ತಾಯಿ ಮಗು ಪ್ರಯಾಣಿಸುವಾಗ ಅಚಾನಕ್ಕಾಗಿ ತಾಯಿ ಮಗು ಕೆಳಗೆ ಬೀಳುತ್ತಾರೆ. ಈ ವೇಳೆ ಬೈಕ್ ಹಿಂಬದಿಯಿಂದ ಬರುತ್ತಿರುವ ಕಾರು ಪಕ್ಕದಲ್ಲಿ ಸಾಗುತ್ತಿರುವ ಲಾರಿ ಇದರ ಮಧ್ಯೆ ರಸ್ತೆಯಲ್ಲಿ ಬಿದ್ದ ತಾಯಿ ಲಾ ರಿಅಡಿಗೆ ಬೀಳುತ್ತಿದ್ದ ತನ್ನ ಕಂದನನ್ನು ಕ್ಷಣಾರ್ಧದಲ್ಲಿ ರಕ್ಷಿಸಿರುವ ಪರಿ ನಿಜಕ್ಕೂ ಅಚ್ಚರಿ.
ಸದ್ಯ ವೀಡಿಯೋ ನೋಡಿದ ಪ್ರತಿಯೊಬ್ಬರು ತಾಯಿಯನ್ನು ಕೊಂಡಾಡಿದ್ದಾರೆ.
2019 ರಲ್ಲಿ ವಿಯೆಟ್ನಾಂನ ಗೋಯಿ, ನಾಮ್ ದಿನ್ ನಲ್ಲಿ ನಡೆದ ಈ ಘಟನೆಯ ವೀಡಿಯೋ ಭಾರೀ ವೈರಲ್ ಆಗುತ್ತಿದೆ.
PublicNext
29/04/2022 04:01 pm