ಹಲವಾರು ರೀತಿಯ ಪಲಾವ್ ಗಳನ್ನು ನಾವು ಟ್ರೈ ಮಾಡಿರುತ್ತೇವೆ, ಇಂದು ಕಾಬೂಲ್ ಚೆನ್ನ ಪಲಾವ್ ಟ್ರೈ ಮಾಡಿ...
ಬೇಕಾಗುವ ಪದಾರ್ಥಗಳು :
ಉದ್ದಕ್ಕೆ ಹೆಚ್ಚಿದ್ದ ಈರುಳ್ಳಿ 1ಕಪ್
ಉದ್ದಕ್ಕೆ ಹೆಚ್ಚಿದ್ದ ದಪ್ಪಮೆಣಸಿನಕಾಯಿ 1ಕಪ್
ಉದ್ದಕ್ಕೆ ಹೆಚ್ಚಿದ್ದ ಆಲೂಗಡ್ಡೆ 1ಕಪ್
ಕಾಬುಲ್ ಚೆನ್ನ 1ಕಪ್
ಹಸಿಮೆಣಸಿನಕಾಯಿ 2
ಚಕ್ಕೆ 2, ಲವಂಗ 2, ಏಲ್ಲಕ್ಕಿ 2
ಮರಟಿ ಮೊಗ್ಗು 2
ಪುಲಾವ್ ಎಲೆ 2
ಎಣ್ಣೆ, ತುಪ್ಪ 2 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಅಚ್ಚಖಾರದ ಪುಡಿ 1/2 ಚಮಚ
ಧನಿಯಾಪುಡಿ 1/2 ಚಮಚ
ಜೀರಾಪುಡಿ 1/2 ಚಮಚ
ಗರಂ ಮಸಾಲಾ 1ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಕೊತ್ತಂಬರಿಸೊಪ್ಪು
ತಯಾರಿಸುವ ವಿಧಾನ :-
ಕಾಬುಲ್ ಚೆನ್ನ ಕಾಳುಗಳನ್ನು 7-8 ಗಂಟೆ ಮುಂಚೆ ನೆನಸಿ ಇಟ್ಟುಕೊಳ್ಳಿ. ನಂತರ ಕಾಳುಗಳನ್ನು ಕುಕ್ಕರ್ ಗೆ ಹಾಕಿ ಸ್ವಲ್ಪ ಉಪ್ಪು ಸೇರಿಸಿ 5 ವಿಷಲ್ ಕೂಗಿಸಿ.
ನಂತಎಆ ಕುಕ್ಕರ್ ಗೆ ಎಣ್ಣೆ ತುಪ್ಪ ಚಕ್ಕೆ ಲವಂಗ ಏಲಕ್ಕಿ ಮರಾಟಿ ಮೊಗ್ಗು ಪುಲಾವ್ ಎಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನು ಒಂದೊಂದಾಗಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರಈರುಳ್ಳಿ ದಪ್ಪಮೆಣಸಿನಕಾಯಿ ಆಲೂಗಡ್ಡೆ ಒಂದೊಂದಾಗಿ ಹಾಕಿ ಫ್ರೈ ಮಾಡಿ.
ಬೇಯಿಸಿದ ಕಾಬುಲ್ ಚೆನ್ನ ಹಾಕಿ ಮತ್ತೊಮ್ಮೆ ಫ್ರೈ ಮಾಡಿದ ನಂತರ ಅಚ್ಚಖಾರದ ಪುಡಿ ಧನಿಯಾಪುಡಿ ಜೀರಾಪುಡಿ ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ.
ನಂತರ ತೊಳೆದ ಅಕ್ಕಿ ಹಾಕಿ 1:2 ಅಂತೆ ನೀರು ಉಪ್ಪು ಹಾಕಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿ. ಆರಿದ ನಂತರ ಕೊತ್ತಂಬರಿಸೊಪ್ಪು ನಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಮೊಸರು ಬಜ್ಜಿ ತಯಾರಿಸುವ ವಿಧಾನ :-
ಒಂದು ಬೌಲ್ ಗೆ ಸಣ್ಣಕ್ಕೆ ಹೆಚ್ಚಿದ ಈರುಳ್ಳಿ ಟೊಮ್ಯಾಟೋ ಸೌತೆಕಾಯಿ ಹಸಿಮೆಣಸಿನಕಾಯಿ ಮೊಸರು ಉಪ್ಪು ಹಾಕಿ ಪಕ್ಕಕ್ಕೆ ಇರಿಸಿ. ನಂತರ ಎಣ್ಣೆ ಸಾಸಿವೆ ಕರಿಬೇವಿನ ಜೊತೆ ಒಗ್ಗರಣೆ ಹಾಕಿ. ಒಗ್ಗರಣೆಯನ್ನು ಮೊಸರಿಗೆ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.
ಬಿಸಿ ಬಿಸಿಯಾದ ಕಾಬುಲ್ ಚೆನ್ನ ಪುಲಾವ್ ಮೊಸರು ಬಜ್ಜಿಯೊಂದಿಗೆ ಸವಿಯಲು ಸಿದ್ದ
PublicNext
05/10/2020 12:46 pm