ಸೌಂದರ್ಯ ಅನ್ನೋದು ನಮ್ಮ ಕಣ್ಣುಗಳಲ್ಲಿದೆ. ಮುಖ ಸುಂದರವಾಗಿ ಕಾಣಬೇಕಂದ್ರೆ ಕಣ್ಣುಗಳು ಅಂದವಾಗಿರಬೇಕು. ಚಂದದ, ಕಾಮನ ಬಿಲ್ಲಿನಂತಹ ತಿದ್ದಿ ತೀಡಿದ ಹುಬ್ಬು, ಅದಕ್ಕೊಪ್ಪುವ ಕಣ್ಣುಗಳಿದ್ರೆ ಎಂಥವರು ಕೂಡ ಚೆಲುವಾಗಿ ಕಾಣಿಸುತ್ತಾರೆ. ಕಾಜೋಲ್, ಐ ಲ್ಯಾಶಸ್, ಮಸ್ಕರಾ ಇವೆಲ್ಲ ನಿಮ್ಮ ಕಣ್ಣುಗಳ ಅಂದ ಹೆಚ್ಚಿಸಬಲ್ಲ ಕೃತಕ ಸಾಧನಗಳು.
ಆದ್ರೆ ಇವನ್ನೆಲ್ಲ ಹಚ್ಚುವ ಮುನ್ನ ಕೊಂಚ ಜಾಗರೂಕರಾಗಿಬೇಕು, ಮೇಕಪ್ ಸೂಕ್ಷ್ಮವಾಗಿರಬೇಕು. ಕಣ್ಣುಗಳ ಚೆಲುವನ್ನು ಹೆಚ್ಚಿಸುವ ಸರಳವಾದ ಮೇಕಪ್ ಹೇಗಿರಬೇಕು ಅನ್ನೋದನ್ನು ನೋಡೋಣ.
ಕಣ್ಣಿಗೆ ಮೇಕಪ್ ಮಾಡುವ ಮುನ್ನ ಐ-ಪ್ರೈಮರ್ ಹಚ್ಚಲು ಮರೆಯಬೇಡಿ. ಇದ್ರಿಂದ ಕಣ್ಣಿನ ಮೇಲೆ ನೀವು ಹಚ್ಚಿಕೊಳ್ಳುವ ಐಶ್ಯಾಡೋ ಹೆಚ್ಚು ಹೊತ್ತು ಇರುತ್ತದೆ. ಜೊತೆಗೆ ಕಲರ್ ಕೂಡ ಚೆನ್ನಾಗಿ ಮೂಡಿ ಬರುತ್ತದೆ. ಅಷ್ಟೇ ಅಲ್ಲ ಕಣ್ಣಿನ ರೆಪ್ಪೆಗಳ ತ್ವಚೆಯನ್ನು ಕೂಡ ಮೃದುವಾಗಿಡುತ್ತದೆ.
ಹುಬ್ಬು ಮತ್ತು ಕಣ್ಣಿನ ರೆಪ್ಪೆಯ ನಡುವಿನ ಜಾಗದಲ್ಲಿರುವ ಮೂಳೆಯ ಮೇಲೆ ಹೈಲೈಟರ್ ಹಚ್ಚಿಕೊಂಡರೆ ನಿಮ್ಮ ಕಣ್ಣುಗಳಿಗೆ ಸುಂದರ ಆಕಾರ ಸಿಗುತ್ತದೆ.
ಕಾಡಿಗೆ ನಿಮ್ಮ ಕಣ್ಣುಗಳ ಅಂದಕ್ಕೆ ಕಲಶವಿಟ್ಟಂತಿರುತ್ತದೆ. ರೆಪ್ಪೆಗಳ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಮಸ್ಕರಾ ಹಚ್ಚಲು ಮರೆಯಬೇಡಿ.
ಕಣ್ಣುಗಳಿಗೆ ಗಾಢವಾದ ಮೇಕಪ್ ಬೇಡ. ಮೇಕಪ್ ತಿಳಿಯಾಗಿದ್ದರೆ ಮಾತ್ರ ನಿಮ್ಮ ಕಣ್ಣುಗಳು ಸುಂದರವಾಗಿ ಎದ್ದು ಕಾಣುತ್ತವೆ.
PublicNext
27/09/2020 03:40 pm