ಸ್ಟ್ರೆಚ್ ಮಾರ್ಕ್ಸ್ ಬಂದಷ್ಟು ಸುಲಭವಾಗಿ ಹೋಗುವುದಿಲ್ಲ. ಚರ್ಮ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಹಿಗ್ಗಿದಾಗ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುತ್ತದೆ. ಹೆಚ್ಚಾಗಿ ಸೊಂಟ, ಹೊಟ್ಟೆ, ಕೆಳ ಬೆನ್ನು ಹಾಗೂ ಸ್ತನದ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಅನೇಕ ಬಾರಿ ಮುಜುಗರಕ್ಕೆ ಕಾರಣವಾಗುತ್ತದೆ.
ಸ್ಟ್ರೆಚ್ ಮಾರ್ಕ್ಸ್ ಗೆ ಮುಕ್ತಿ ಹೇಳಲು ಮಹಿಳೆಯರು ಅನೇಕ ದುಬಾರಿ ಕ್ರೀಂ ಮೊರೆ ಹೋಗ್ತಾರೆ. ಆದ್ರೆ ಜೇಬು ಖಾಲಿಯಾಗುತ್ತದೆಯೇ ವಿನಃ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುವುದಿಲ್ಲ. ಮನೆ ಮದ್ದು ಇದಕ್ಕೆ ಬೆಸ್ಟ್. ಎಲ್ಲರ ಅಡುಗೆ ಮನೆಯಲ್ಲಿರುವ ಅಡುಗೆ ಸೋಡಾ ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡುತ್ತದೆ.
ಅಡುಗೆ ಸೋಡಾದ ಪೇಸ್ಟ್ ಮಾಡಲು ಬೇಕಾಗುವ ವಸ್ತು :
½ ಚಮಚ ನಿಂಬೆ ಹಣ್ಣಿನ ರಸ, ಒಂದರಿಂದ ಎರಡು ಚಮಚ ಅಡಿಗೆ ಸೋಡಾ.
ಪೇಸ್ಟ್ ತಯಾರಿಸುವ ವಿಧಾನ : ನಿಂಬೆ ಹಣ್ಣಿನ ರಸಕ್ಕೆ ಅಡುಗೆ ಸೋಡಾವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಅದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿ. ಪೇಸ್ಟ್ ಒಣಗಿದ ನಂತ್ರ ಸ್ವಚ್ಛ ನೀರಿನಲ್ಲಿ ತೊಳೆಯಿರಿ. ರಾತ್ರಿ ಮಲಗುವ ಮೊದಲು ಪೇಸ್ಟ್ ಹಚ್ಚಿಕೊಳ್ಳುವುದು ಒಳ್ಳೆಯದು. ವಾರಗಳವರೆಗೆ ಇದನ್ನು ಮುಂದುವರೆಸಿದ್ರೆ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗ್ತಾ ಬರುತ್ತದೆ.
PublicNext
23/09/2020 03:12 pm