ಮುಖದ ಅಂದ ಹೆಚ್ಚಿಸಲು ಯುವತಿಯರು ಮಹಿಳೆಯರು ಮಾಡುವ ಕಸರತ್ತು ಒಂದೆರಡಲ್ಲ. ಅದರಲ್ಲಿಯೂ ಮಳೆಗಾಲ ಬಂತೆಂದರೆ ಚರ್ಮಕ್ಕೆ ಇನ್ನಷ್ಟು ಆರೈಕೆ ಅಗತ್ಯ. ಫೇಷಿಯಲ್, ಫೇಸ್ ಪ್ಯಾಕ್ ಹೀಗೆ ವಿವಿಧ ವಿಧಾನಗಳ ಮೊರೆ ಹೋಗುತ್ತಾರೆ.
ಮುಖ ಆಕರ್ಷಣೀಯವಾಗಿ ಕಾಣಲು, ಎಣ್ಣೆ ಅಂಶ ಕಡಿಮೆ ಮಾಡಲು ಬ್ಯೂಟಿಷಿಯನ್ ಗಳ ಮೊರೆ ಹೋಗಬೇಕಿಲ್ಲ. ನಮ್ಮ ಅಡುಗೆ ಮನೆಯಲ್ಲಿಯೇ ಇದಕ್ಕೆ ಪರಿಹಾರವಿದೆ.
ಸಹಜ ಸೌಂದರ್ಯಕ್ಕೆ ಕಡಲೆಹಿಟ್ಟು ಪರಿಣಾಮಕಾರಿಯಾಗಿದೆ, ಮನೆಯಲ್ಲಿಯೇ ಸಿಗುವ ಈ ವಸ್ತುಗಳು ಹೆಚ್ಚು ಉಪಯುಕ್ತವಾಗಿದ್ದು, ಸಹಕಾರಿಯಾಗಿದೆ. ಇದು ನಿಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ
ಮುಖದ ಅಂದ :
ಕಡಲೆಹಿಟ್ಟು, ಅರಿಶಿನ, ಮೊಸರು, ನಿಂಬೆ ಹುಳಿ, ಹಾಲು, ಚೆಂದನದ ಪುಡಿಯನ್ನು ಚೆನ್ನಾಗಿ ಕಲೆಸಿ ಮುಖ ಹಾಗೂ ಕೈಕಾಲಿಗೆ ಹಚ್ಚಿದರೆ, ಕಾಂತಿ ಹೆಚ್ಚಲಿದೆ.
ಸಮುದ್ರದ ಉಪ್ಪು, ವೆಜಿಟೆಬಲ್ ಗ್ಲಿಸರಿನ್, ರೋಸ್ವಾಟರ್ ಸ್ಕ್ರಬ್ ಬಳಸುವುದರಿಂದ ನಿಮ್ಮ ತುಟಿ ಅಂದದ ಜೊತೆ ಮಾಶ್ಚರೈಸರ್ ಕಾಪಾಡುವಲ್ಲಿ ಸಹಾಯಕಾರಿಯಾಗುವುದು.
ಕೂದಲಿನ ಆರೈಕೆ :
ಮೊಸರು, ಜೇನುತುಪ್ಪ, ಮೊಟ್ಟೆ ಮಿಶ್ರಣ ಮಾಡಿ ತಲೆ ಕೂದಲಿಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ಇಲ್ಲದಂತೆ ಆಗುತ್ತದೆ. ಅಲ್ಲದೇ ತಲೆ ಕೂದಲು ಇದರಿಂದ ಶೈನಿಯಂತೆ ಮಿಂಚಲಿದೆ.
PublicNext
26/09/2020 06:19 pm