ಮನೆಯಲ್ಲಿ ಕಡಲೇಕಾಯಿ ಚಾಟ್ ಮಾಡುವುದು ತುಂಬಾ ಸುಲಭ
ಬೇಕಾಗುವ ಸಾಮಗ್ರಿಗಳು-1 ಕಪ್-ಬೇಯಿಸಿಟ್ಟುಕೊಂಡ ಕಡಲೇಕಾಯಿ, ½ ಟೀ ಸ್ಪೂನ್ ಅರಿಶಿನ, 2 ಕಪ್ ನೀರು, 1 ಟೀ ಸ್ಪೂನ್ ಉಪ್ಪು, ½ ಚಮಚ ಚಾಟ್ ಮಸಾಲ, 1 ದೊಡ್ಡ ಚಮಚ ಈರುಳ್ಳಿ ಸಣ್ಣಗೆ ಹೆಚ್ಚಿದ್ದು, ಖಾರದ ಪುಡಿ-1/4 ಟೀ ಸ್ಪೂನ್, 1 ಟೀ ಸ್ಪೂನ್ ಪುದೀನಾ ಚಟ್ನಿ, ¼ ಕಪ್ ಟೊಮೆಟೊ ಸಣ್ಣಗೆ ಕತ್ತರಿಸಿದ್ದು, 1 ಟೇಬಲ್ ಸ್ಪೂನ್ ದಾಳಿಂಬೆ ಹಣ್ಣಿನ ಬೀಜ, 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು, 1 ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸ, ಸ್ವಲ್ಪ ಉಪ್ಪು.
ಮೊದಲಿಗೆ ನೀರು, ಚಿಟಿಕೆ ಉಪ್ಪು ಹಾಕಿ,ಕಡಲೇಕಾಯಿಬೀಜವನ್ನು ಬೇಯಿಸಿಟ್ಟುಕೊಳ್ಳಿ. ಇದನ್ನು ಒಂದು ದೊಡ್ಡ ಬೌಲ್ ಗೆ ಹಾಕಿ. ಅದಕ್ಕೆ ಖಾರದಪುಡಿ, ಪುದೀನಾ ಚಟ್ನಿ, ಚಾಟ್ ಮಸಾಲಾ ಹಾಕಿ ಚೆನ್ನಾಗಿ ಕೈಯಾಡಿಸಿ. ನಂತರ ಟೊಮೆಟೊ, ಈರುಳ್ಳಿ, ದಾಳಿಂಬೆ, ಲಿಂಬೆ ಹಣ್ಣಿನ ರಸ, ಕೊತ್ತಂಬರಿ ಸೊಪ್ಪು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಚಾಟ್ ರೆಡಿ.
PublicNext
11/11/2021 03:09 pm