ಓಟ್ಸ್ ದೋಸೆ ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು:
ಓಟ್ಸ್-1 ಕಪ್, ಅಕ್ಕಿ ಹಿಟ್ಟು-1/4 ಕಪ್, ರವೆ-1/4 ಕಪ್, ಜೀರಿಗೆ-1 ಟೀ ಸ್ಪೂನ್, ಈರುಳ್ಳಿ-1, ಹಸಿಮೆಣಸು-1, ಎಣ್ಣೆ-ಅಗತ್ಯವಿರುವಷ್ಟು,ಉಪ್ಪು-ರುಚಿಗೆ ತಕ್ಕಷ್ಟು, ನೀರು ಅಗತ್ಯವಿರುವಷ್ಟು.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಓಟ್ಸ್ ಹಾಕಿ 3 ನಿಮಿಷಗಳ ಕಾಲ ಡ್ರೈ ರೋಸ್ಟ್ ಮಾಡಿಕೊಳ್ಳಿ.
ಇದು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿಮೆಣಸು, ಈರುಳ್ಳಿ ಹಾಕಿ ಫ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ.
ನಂತರ ಒಂದು ಬೌಲ್ ಗೆ ಓಟ್ಸ್ ಪುಡಿ, ಅಕ್ಕಿಹಿಟ್ಟು, ರವೆ, ಜೀರಿಗೆ, ಈರುಳ್ಳಿ, ಹಸಿಮೆಣಸು ಹಾಕಿ ಅಗತ್ಯವಿರುವಷ್ಟು ನೀರು ಹಾಕಿ ದೋಸೆ ಹಿಟ್ಟು ತಯಾರಿಸಿಕೊಳ್ಳಿ.
ಇದು ತೆಳುವಾಗಿರಲಿ. ನಂತರ ಉಪ್ಪು ಸೇರಿಸಿ ಕದಡಿ. ಗ್ಯಾಸ್ ಮೇಲೆ ತವಾ ಇಟ್ಟು ಅದು ಬಿಸಿಯಾದಾಗ ಎಣ್ಣೆ ಸವರಿ ರವೆ ದೋಸೆ ರೀತಿ ದೋಸೆ ಮಾಡಿಕೊಂಡು ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ಚಟ್ನಿ ಜತೆ ಸವಿಯಲು ಚೆನ್ನಾಗಿರುತ್ತದೆ.
PublicNext
18/12/2020 04:13 pm