ಟೊಮೆಟೊ ಬಳಸಿ ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳುವ ಬಗ್ಗೆ ತಿಳಿದುಕೊಳ್ಳಿ. ಟೊಮೆಟೊ ಹಾಗೂ ಪುದೀನ ಮಿಶ್ರಣವು ಚರ್ಮವನ್ನು ಕಲೆ ರಹಿತವಾಗಿ ಮಾಡುತ್ತದೆ.
ಹಾಗಾಗಿ 1 ಚಮಚ ಪುದೀನಾ ಪೇಸ್ಟ್ ಗೆ 2 ಚಮಚ ಟೊಮೆಟೊ ಪೇಸ್ಟ್ ನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಮಾಡುತ್ತಾ ಬಂದರೆ ಕಲೆರಹಿತ ತ್ವಚೆ ನಿಮ್ಮದಾಗುತ್ತದೆ.
ಸ್ಕಿನ್ ಟ್ಯಾನ್ ತೆಗೆದು ಹಾಕಲು ಟೊಮೆಟೊ ಸಹಕಾರಿ. ಬಿಸಿಲಿನಿಂದ ಮುಖದ ಚರ್ಮ ಕಂದು ಬಣ್ಣಕ್ಕೆ ತಿರುಗಿದ್ದರೆ ಟೊಮೆಟೊ ಫೇಸ್ ಪ್ಯಾಕ್ ಬಳಸಿ.
1 ಚಮಚ ಟೊಮೆಟೊ ತಿರುಳಿಗೆ 1 ಚಮಚ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ.
15 ನಿಮಿಷ ಬಿಟ್ಟು ತಣ್ಣೀರಿನಿಂದ ವಾಶ್ ಮಾಡಿ. ಇದರಿಂದ ಸನ್ ಟ್ಯಾನ್ ರಿಮೂವ್ ಆಗಿ ಮುಖದ ಕಾಂತಿ ಹೆಚ್ಚಾಗುತ್ತದೆ.
PublicNext
18/12/2020 03:58 pm