ಬೇಕಾಗುವ ಸಾಮಗ್ರಿಗಳು: ಬೇಬಿಕಾರ್ನ್ – 1/2 ಕೆ.ಜಿ., ಮೈದಾಹಿಟ್ಟು – 1/2ಕಪ್, ಕಾರ್ನ್ ಫ್ಲೋರ್ – 1/4ಕಪ್, ಅಕ್ಕಿಹಿಟ್ಟು – 1/2 ಟೀ ಚಮಚ, ಅರಿಸಿನ – 1/2 ಟೀ ಚಮಚ, ಜೀರಿಗೆಪುಡಿ – 1 ಟೀ ಚಮಚ, ಕೊತ್ತಂಬರಿ ಪುಡಿ – 1 ಟೀ ಚಮಚ, ಅಚ್ಚ ಖಾರದಪುಡಿ – 1 ಟೀ ಚಮಚ, ಗರಂಮಸಾಲೆ – 1/2 ಟೀ ಚಮಚ, ಉಪ್ಪು – ರುಚಿಗೆ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೀ ಚಮಚ, ಕರಿಬೇವು – 6 (ಚಿಕ್ಕದಾಗಿ ಹೆಚ್ಚಿಕೊಂಡಿದ್ದು), ಕೊತ್ತಂಬರಿಸೊಪ್ಪು – 2 ಟೇಬಲ್ ಚಮಚ (ಚಿಕ್ಕದಾಗಿ ಹೆಚ್ಚಿಕೊಂಡಿದ್ದು), ನಿಂಬೆರಸ – 1 ಚಮಚ, ಕರಿಯಲು ಎಣ್ಣೆ.
ತಯಾರಿಸುವ ವಿಧಾನ:
ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ ಅದರಲ್ಲಿ ಬೇಬಿಕಾರ್ನ್ ಅನ್ನು ಹಾಕಿ. ಜೊತೆಗೆ 1 ಟೇಬಲ್ ಚಮಚ ಉಪ್ಪನ್ನು ಹಾಕಿ 5 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿ.
ನಂತರ ನೀರನ್ನು ಬಸಿಯಿರಿ. ಒಂದು ಬೌಲ್‌ನಲ್ಲಿ ಮೈದಾಹಿಟ್ಟು, ಕಾರ್ನ್‌ಫ್ಲೋರ್, ಅಕ್ಕಿಹಿಟ್ಟು, ಅರಿಸಿನ, ಜೀರಿಗೆಪುಡಿ, ಕೊತ್ತಂಬರಿಪುಡಿ, ಅಚ್ಚಖಾರದ ಪುಡಿ, ಗರಂಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಕರಿಬೇವು, ಕೊತ್ತಂಬರಿ ಸೊಪ್ಪು, ನಿಂಬೆರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣಕ್ಕೆ ನೀರನ್ನು ಹಾಕಿ. ಹಿಟ್ಟು ಬೋಂಡಾಹಿಟ್ಟಿನ ಹದವಿರಲಿ. ಎಣ್ಣೆ ಬಿಸಿಯಾದ ಮೇಲೆ ಬೇಬಿಕಾರ್ನ್ ಅನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಬಿಡಿ. ಎರಡೂ ಬದಿಯನ್ನೂ ಮಧ್ಯಮ ಉರಿಯಲ್ಲಿ ಕೆಂಬಣ್ಣ ಬರುವವರೆಗೆ ಕಾಯಿಸಿ. ರುಚಿಕರವಾದ ಬೇಬಿಕಾರ್ನ್ ಫ್ರೈ ಅನ್ನು ಟೊಮೆಟೊ ಕೆಚಪ್, ಚಟ್ನಿಯೊಂದಿಗೆ ಸವಿಯಿರಿ.
PublicNext
15/12/2020 07:37 pm