ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳ್ಳಿ ಸ್ಟೈಲ್ ಚಿಕನ್ ಚಾಪ್ಸ್ ರುಚಿ ಸವಿಯಿರಿ

ಹಳ್ಳಿಗಳ ಭಾಗದ ಅಡುಗೆ ಅಂದ್ರೆ ನಗರ, ಪಟ್ಟಣವಾಸಿಗಳಿಗೆ ತುಂಬಾ ಇಷ್ಟ. ಅದರಲ್ಲೂ ನಾನ್‌ವೆಜ್ ಪ್ರಿಯರು ಹಳ್ಳಿ ಸ್ಟೈಲ್ ಬಾಡೂಟ ರೆಸಿಪಿ ಟ್ರೈ ಮಾಡುತ್ತಾರೆ. ಅಂತಹದ್ದೇ ಒಂದು ರೆಸಿಪಿ ಇಲ್ಲಿದೆ ನೋಡಿ. ರುಚಿ ರುಚಿಯಾದ ಹಳ್ಳಿ ಸ್ಟೈಲ್ ಚಿಕನ್ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

ಚಿಕನ್ – ಅರ್ಧ ಕೆ.ಜಿ

ದೊಡ್ಡ ಗಾತ್ರ 1 ಇರುಳ್ಳಿ

ತೆಂಗಿನಕಾಯಿ ತುರಿ- 2 ಟೀ ಸ್ಪೂನ್

ಪುದೀನಾ ಸ್ವಲ್ಪ

ಕೊತ್ತಂಬರಿ ಸೊಪ್ಪು

ಬೆಳುಳ್ಳಿ-1

ಹಸಿಮೆಣಸಿನ ಕಾಯಿ – 3 ರಿಂದ 4

ಚಕ್ಕೆ, ಲವಂಗ- 3 ರಿಂದ 4

ಶುಂಠಿ-1 ಚಿಕ್ಕ ಗಾತ್ರದ್ದು

ಎಣ್ಣೆ- 1 ಕಪ್

ಕಾಳುಮೆಣಸಿನ ಪುಡಿ – 1 ಟೀ ಸ್ಪೂನ್

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

* ಮೊದಲು ಅರ್ಧ ಕೆಜಿ ಚಿಕನ್‌ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಉಪ್ಪು, ಅರಿಶಿಣ ಹಾಕಿ ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಇಡಬೇಕು.

* ಒಂದು ಬೆಳ್ಳುಳ್ಳಿ, ಅರ್ಧದಷ್ಟು ಶುಂಠಿ ಹಾಗೂ 3ರಿಂದ 4 ಚೆಕ್ಕೆಯನ್ನು ಮಿಕ್ಸಿ ಜಾರಿಗೆ ಹಾಕಬೇಕು. ನಂತರ ಪುದೀನಾ ಕೊತ್ತಂಬರಿ ಸ್ವಲ್ಪ ಪ್ರಮಾಣದಲ್ಲಿ ಹಾಕಬೇಕು. ಹಾಗೇ ಲವಂಗ, ಕಾಯಿ ತುರಿ 2 ಸ್ಪೂನ್ ಬೇಕಾದರೆ ದನಿಯಾ ಪೌಡರ್ ಹಾಕಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.

* ನಂತರ ಒಂದು ಪಾತ್ರೆಯಲ್ಲಿ 2 ರಿಂದ 3 ಸ್ಪೂನ್ ಎಣ್ಣೆ ಹಾಕಿ ಸ್ಟವ್ ಮೇಲೆ ಇಟ್ಟು ಎಣ್ಣೆ ಬಿಸಿಯಾಗುವವರೆಗೆ ಕಾಯಬೇಕು.

* ಎಣ್ಣೆ ಬಿಸಿಯಾದ ನಂತರ ಈರುಳ್ಳಿ ಹಾಕಿ ಕೆಂಪಗಾಗುವವರೆಗೆ ಫ್ರೈ ಮಾಡಬೇಕು.

* ಬಳಿಕ ಚಿಕನ್ ಹಾಕಿ ಜೊತೆಯಲ್ಲಿಯೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನೀರು ಇಂಗುವವರೆಗೂ ಚಿಕನ್ ಫ್ರೈ ಮಾಡಬೇಕು.

* ಈ ಮೊದಲು ನಾವು ರುಬ್ಬಿ ತಯಾರಿಸಿದ ಮಸಾಲೆಯನ್ನು ಚಿಕನ್‌ಗೆ ಹಾಕಬೇಕು. ನಂತರ ಕಾಳುಮೆಣಸಿನ ಪುಡಿ ಹಾಕಬೇಕು, ಜೊತೆಯಲ್ಲಿ 1 ಗ್ಲಾಸ್ ನೀರು ಹಾಕಿ ಚೆನ್ನಾಗಿ ಬೇಯಿಸಬೇಕು.

* 10 ರಿಂದ 15 ನಿಮಿಷಗಳ ಚಿಕನ್ ಮಸಾಲೆಯೊಂದಿಗೆ ಮಿಶ್ರಣವಾಗುವವರೆಗೂ ಫ್ರೈ ಮಾಡಬೇಕು. ಈಗ ರುಚಿ ರುಚಿಯಾದ ಹಳ್ಳಿ ಸ್ಟೈಲ್ ಚಿಕನ್ ಚಾಪ್ಸ್ ಸವಿಯಲು ಸಿದ್ಧವಾಗುತ್ತದೆ.

Edited By : Vijay Kumar
PublicNext

PublicNext

12/12/2020 05:34 pm

Cinque Terre

24.88 K

Cinque Terre

0