ಉತ್ತರ ಕರ್ನಾಟಕ ಭಾಗದಲ್ಲಿ ರೊಟ್ಟಿ ಅಥವಾ ಚಪಾತಿ ಊಟದಲ್ಲಿ ಬೆಂಡೆಕಾಯಿ ಫ್ರೈ ಇದ್ದರೆ ಟೇಸ್ಟಿ ಆಗಿರುತ್ತದೆ. ಊಟದ ಜೊತೆ ಅಷ್ಟೇ ಅಲ್ಲದೆ ಸ್ನ್ಯಾಕ್ಸ್ ರೀತಿಯಲ್ಲೂ ಈ ಬೆಂಡೆಕಾಯಿ ಫ್ರೈ ತಿನ್ನಬಹುದು. ಹಾಗಾದರೆ ಒಮ್ಮೆ ಈ ರೆಸಿಪಿ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಬೆಂಡೆಕಾಯಿ-100 ಗ್ರಾಂ
ಬೆಳ್ಳುಳ್ಳಿ- 2
ಕಾರದಪುಡಿ -2 ಟೀ ಸ್ಪೂನ್
ಕರೀಬೇವು- 4ರಿಂದ 5
ಇಂಗು- ಚಿಟಿಕೆ
ಕಡಲೆ ಹಿಟ್ಟು- ಒಂದು ಕಪ್
ಗರಂಮಸಾಲಾ- ಅರ್ಧ ಟೀ ಸ್ಪೂನ್
ಅರಿಶಿಣ -ಚಿಟಿಕೆ
ದನಿಯಾ ಪೌಡರ್- 1 ಟೀ ಸ್ಪೂನ್
ಲಿಂಬು- ಒಂದು
ಎಣ್ಣೆ- ಒಂದು ಕಪ್
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
* ಸ್ಟೌ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2ರಿಂದ 3 ಸ್ಪೂನ್ ಎಣ್ಣೆ ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು.
* ಎಣ್ಣೆ ಬಿಸಿಯಾದ ನಂತ್ರ 4ರಿಂದ 5 ಕರಿಬೇವು ಮತ್ತು ಸಿಪ್ಪೆ ತೆಗೆದ 2 ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
* ನಂತರ ಇದಕ್ಕೆ ಒಂದು ಕಪ್‍ನಷ್ಟು ಕಡಲೆ ಹಿಟ್ಟನ್ನು ಹಾಕಿ ಸುವಾಸನೆ ಬರುವವರೆಗೂ ಫ್ರೈ ಮಾಡಬೇಕು. ಈ ಮಸಾಲೆಯನ್ನು ಒಂದು ಕಡೆ ತೆಗೆದಿಟ್ಟುಕೊಳ್ಳಬೇಕು.
* ಇತ್ತ 100 ಗ್ರಾಂ ಬೆಂಡೆಕಾಯಿಯನ್ನು ತೆಗೆದುಕೊಂಡು ಮಧ್ಯದಲ್ಲಿ ಸೀಳಿಕೊಳ್ಳಬೇಕು.
* ಈಗ ಹುರಿದಿರುವ ಮಸಾಲೆಗೆ ಸ್ವಲ್ಪ ಎಣ್ಣೆ, ಅರ್ಧ ಸ್ಪೂನ್ ಗರಂಮಸಾಲಾ , ಚಿಟಿಕೆ ಅರಿಶಿಣ, ಒಂದು ಟೀ ಸ್ಪೂನ್ ದನಿಯಾ ಪೌಡರ್, 2 ಟೀ ಸ್ಪೂನ್ ಖಾರದಪುಡಿ ಹಾಗೂ
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದು ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
* ಈ ಮಸಾಲೆಯನ್ನು ಸೀಳಿರುವ ಬೆಂಡೆಕಾಯಿ ಒಳಗೆ ತುಂಬಬೇಕು.
* ನಂತರ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಕಾದ ನಂತರ ಮಸಾಲೆ ತುಂಬಿರುವ ಬೆಂಡೆಕಾಯಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
ಈಗ ರುಚಿಯಾದ ಬೆಂಡೆಕಾಯಿ ಫ್ರೈ ಸವಿಯಲು ಸಿದ್ಧವಾಗುತ್ತದೆ. ರುಚಿ ರುಚಿಯಾದ ಬೆಂಡೆಕಾಯಿ ಫ್ರೈಯನ್ನು ಊಟದ ಜೊತೆಗೆ ಅಥವಾ ಸಂಜೆ ವೇಳೆ ಸ್ನ್ಯಾಕ್ಸ್ ಆಗಿಯೂ ತಿನ್ನಬಹುದು.
PublicNext
06/12/2020 11:04 am