ಪ್ರಮುಖ ಸಾಮಗ್ರಿ
• 4 - ಕತ್ತರಿಸಿದ ಬ್ರೆಡ್ ಪೀಸ್ ಗಳು
ಮುಖ್ಯ ಅಡುಗೆಗೆ
• 3/4 ಕಪ್ ಮೊಸರು
• ಅಗತ್ಯಕ್ಕೆ ತಕ್ಕಷ್ಟು ಕೊತ್ತಂಬರಿ ಚಟ್ನಿ
• 5 - ಕತ್ತರಿಸಿದ ಹಸಿಮೆಣಸಿನಕಾಯಿ
• ಅಗತ್ಯಕ್ಕೆ ತಕ್ಕಷ್ಟು ಹುಣಸೆಹಣ್ಣು
• 1 ಚಮಚ ಸಕ್ಕರೆ
• ಅಗತ್ಯಕ್ಕೆ ತಕ್ಕಷ್ಟು ಪುಡಿ ಮಾಡಿದ ಜೀರಿಗೆ
• 1 ಚಮಚ ಖಾರದ ಪುಡಿ
• ಅಗತ್ಯಕ್ಕೆ ತಕ್ಕಷ್ಟು ಉಪ್ಪು
• 2 ಕಪ್ ಮಜ್ಜಿಗೆ
• 2 - ಬೇಯಿಸಿದ ಆಲೂಗಡ್ಡೆ
• ಅಗತ್ಯಕ್ಕೆ ತಕ್ಕಷ್ಟು ಕರಿ ಉಪ್ಪು
ಮಾಡುವ ವಿಧಾನ
- ಬ್ರೆಡ್ ಸ್ಲೈಸ್ ಗಳನ್ನು ತೆಗೆದುಕೊಂಡು ಅದರ ಅಂಚುಗಳನ್ನು ಕತ್ತರಿಸಿಕೊಳ್ಳಿ.- ನಂತರ ಒಂದು ಪ್ಲೇಟ್ನಲ್ಲಿ ಪಕ್ಕಕ್ಕೆ ಇರಿಸಿ.
ಬ್ರೆಡ್ ಮೊಸರು ವಡೆ ಟೇಸ್ಟ್ ಮಾಡಿದ್ದೀರಾ?
- ಒಂದು ಬಟ್ಟಲಲ್ಲಿ ಬೇಯಿಸಿಕೊಂಡ ಆಲೂಗಡ್ಡೆ, ಹಸಿ ಮೆಣಸಿನಕಾಯಿ, ಹುಳಿ ಪುಡಿ, ಒಣದ್ರಾಕ್ಷಿ, ಜೀರಿಗೆ ಪುಡಿ ಮತ್ತು ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.- ಮೊಸರಿಗೆ ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
- ಈ ಮೊದಲೆ ಸಿದ್ಧಪಡಿಸಿಕೊಂಡ ಒಂದು ಬ್ರೆಡ್ ಸ್ಲೈಸ್ ತೆಗೆದುಕೊಳ್ಳಿ.- ನಂತರ ಅದರ ಮೇಲೆ ಮೊಸರನ್ನು ಲೇಪಿಸಿ.- ಬಳಿಕ ಆಲೂಗಡ್ಡೆಯ ಮಿಶ್ರಣದ ಉಂಡೆಯನ್ನು ಇಡಿ.- ಪುನಃ ಬ್ರೆಡ್ ಅನ್ನು ಉಂಡೆಯ ಸುತ್ತ ಮುಚ್ಚುವಂತೆ ಸುತ್ತಿಕೊಳ್ಳಬೇಕು.
- ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ.- ಬಿಸಿಯಾದ ತುಪ್ಪಕ್ಕೆ ಬ್ರೆಡ್ನ ಉಂಡೆಯನ್ನು ಸೇರಿಸಿ, ಹುರಿಯಿರಿ.- ಉಂಡೆಯ ಸುತ್ತಲೂ ಹೊಂಬಣ್ಣ ಬರುವ ಹಾಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ.
- ಬಳಿಕ ಬಡಿಸುವ ಪ್ಲೇಟ್ ಅಲ್ಲಿ ಬೇಯಿಸಿದ ಬ್ರೆಡ್ ವಡೆಯನ್ನು ಇಡಿ.- ನಂತರ ಅದರ ಮೇಲೆ ಸಕ್ಕರೆ ಮಿಶ್ರಿತ ಮೊಸರು, ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣಿನ ಚಟ್ನಿ, ಜೀರಿಗೆ ಪುಡಿ, ಮೆಣಸಿನ ಪುಡಿ ಮತ್ತು ಕಪ್ಪು ಉಪ್ಪನ್ನು ಸೇರಿಸಿ- ಚೆನ್ನಾಗಿ ಅಲಂಕರಿಸಿದ ಬಳಿಕ ಸವಿಯಲು ನೀಡಿ.
PublicNext
12/11/2020 07:53 pm