ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಹು ಬೇಗ ತಯಾರಿಸಿ ಬೆಂಡೆಕಾಯಿ ಮಸಾಲೆ

ಬೇಕಾಗುವ ಪದಾರ್ಥಗಳು

• ಶುಂಠಿ, ಬೆಳ್ಳುಳ್ಳು- ಸ್ವಲ್ಪ

• ಈರುಳ್ಳಿ- 1

• ಚಕ್ಕೆ, ಲವಂಗ ಪುಡಿ- ಅರ್ಧ ಚಮಚ

• ಅಚ್ಚಖಾರದ ಪುಡಿ- 1 ಚಮಚ

• ಉಪ್ಪು- ರುಚಿಗೆ ತಕ್ಕಷ್ಟು

• ಟೊಮೆಟೋ ಪ್ಯೂರಿ - 1 ಬಟ್ಟಲು

ಮಾಡುವ ವಿಧಾನ

• ಮೊದಲಿಗೆ ಶುಂಠಿ, ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು.

ಅದೇ ರೀತಿ ಟೊಮೆಟೋವನ್ನು ರುಬ್ಬಿಕೊಂಡು ಪ್ಯೂರಿ ತಯಾರು ಮಾಡಿಕೊಳ್ಳಬೇಕು.

• ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು, ಎಣ್ಣೆಯನ್ನು ಹಾಕಿ ಅದಕ್ಕೆ ಕತ್ತರಿಸಿಕೊಂಡ ಬೆಂಡೆಕಾಯಿಗಳನ್ನು ಹಾಕಿ

ಕರಿದುಕೊಳ್ಳಬೇಕು.

ನಂತರ ಉಳಿದ ಎಣ್ಣೆಯನ್ನು ತೆಗೆದಿಟ್ಟು 4 ಚಮಚದಷ್ಟು ಎಣ್ಣೆ ಹಾಕಿ ಈಗಾಗಲೇ ರುಬ್ಬಿಕೊಂಡ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಪೇಸ್ಚ್

ಹಾಕಿ ಕೆಂಪಗೆ ಹುರಿದುಕೊಂಡು ನಂತರ ಟೊಮೆಟೋ ಪ್ಯೂರಿ ಹಾಕಬೇಕು.

• ಪ್ಯೂರಿ ಎಣ್ಣೆ ಬಿಟ್ಟ ಬಳಿಕ ಇದಕ್ಕೆ ಚಕ್ಕೆ,ಲವಂಗ ಪುಡಿ, ಖಾರದಪುಡಿ ಹಾಗೂ ಉಪ್ಪು ಹಾಕಿ ಕುದಿಸಿಕೊಂಡು, ನಂತರ ಬೆಂಡೆಕಾಯಿ ಹಾಕಿ 5 ನಿಮಿಷ ಬೇಯಿಸಿದರೆ, ರುಚಿಕರವಾದ ಬೆಂಡೆಕಾಯಿ ಮಸಾಲೆ ಸಿದ್ಧ.

Edited By : Nirmala Aralikatti
PublicNext

PublicNext

10/11/2020 01:40 pm

Cinque Terre

24.33 K

Cinque Terre

0