ಸೌಂದರ್ಯ ವೃದ್ಧಿಗಾಗಿ ಎಲ್ಲರೂ ನಿತ್ಯ ಒಂದಿಲ್ಲೊಂದು ಹೊಸ ಹೊಸ ಕ್ರೀಂ, ಪೌಡರ್ ಗಳನ್ನಾ ಬಳಸುತ್ತಿರುತ್ತಾರೆ.
ಆದ್ರೆ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ಹೇಗೆ ಸುಂದರವಾಗಿ ಕಾಣಬೇಕು ಎನ್ನುವವರಿಗೆ ಇಲ್ಲಿದೆ ಒಂದು ಸಿಂಪಲ್ ಟ್ರಿಕ್ಸ್
ಅಡುಗೆ ಸೋಡಾ ಇದನ್ನು ಅಡುಗೆಗೆ ಬಳಸುತ್ತಾರೆ. ಆದರೆ ಇದರಿಂದ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು.
½ ಚಮಚ ಅಡುಗೆ ಸೋಡಾವನ್ನು ನಿಮ್ಮ ಫೇಸ್ ವಾಶ್ ಗೆ ಮಿಕ್ಸ್ ಮಾಡಿ ಅದರಿಂದ ಮುಖ ತೊಳೆಯುವುದರಿಂದ ಮುಖದಲ್ಲಿ ಕುಳಿತಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಮುಖ ಕ್ಲೀನ್ ಆಗುತ್ತದೆ.
ಮೊಡವೆ, ಗುಳ್ಳೆಗಳು, ಅಲರ್ಜಿ ಸಮಸ್ಯೆ ದೂರವಾಗುತ್ತದೆ.
ಹಾಗೇ ಟೂತ್ ಪೇಸ್ಟ್ ಗೆ 1 ಚಿಟಿಕೆ ಅಡುಗೆ ಸೋಡಾ ಮಿಕ್ಸ್ ಮಾಡಿ ಹಲ್ಲುಜ್ಜಿ. ಇದರಿಂದ ಹಲ್ಲುಗಳು ಸ್ವಚ್ಛವಾಗುವುದಲ್ಲದೆ, ಹೊಳಪನ್ನು ಪಡೆಯುತ್ತದೆ.
ಇದನ್ನು ವಾರಕ್ಕೊಮ್ಮೆ ಬಳಸಿ.
ಅಲ್ಲದೇ ಅಡುಗೆ ಸೋಡಾವನ್ನು ಶಾಂಪೂವಿಗೆ ಮಿಕ್ಸ್ ಮಾಡಿ ನೆತ್ತಿಗೆ ಹಚ್ಚುವುದರಿಂದ ಕೂದಲಿನ ಸಮಸ್ಯೆ ದೂರವಾಗುತ್ತದೆ.
ಇದು ಉತ್ತಮ ಕಂಡೀಷನರ್ ರೀತಿಯಲ್ಲಿ ಕೆಲಸ ಮಾಡುತ್ತದೆ.
PublicNext
29/10/2020 04:03 pm