ಸುಂದರವಾಗಿ ಕಾಣಬೇಕು ಎನ್ನುವ ಆಸೆ ಪ್ರತಿಯೊಬ್ಬರದ್ದು ಹಾಗಾಗಿ ಎಲ್ಲರೂ ಮುಖದ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡತ್ತಾರೆ.
ಹಾಗಾಗಿ ಮೊಡವೆಗಳು ಮುಖದ ಸೌಂದರ್ಯವನ್ನು ಹಾಳುಗೆಡುವುತ್ತದೆ. ಇದು ಸಾಮಾನ್ಯ ಸಮಸ್ಯೆಯಾಗಿದ್ದರೂ ನಿರ್ಲಕ್ಷ್ಯವಹಿಸುವಂತಿಲ್ಲ.
ಮಾರುಕಟ್ಟೆಯಲ್ಲಿ ನಾನಾ ರೀತಿಯ ಪಿಂಪಲ್ ಕ್ರೀಮ್ ಗಳು ಲಭ್ಯವಿದೆ. ಆದರೆ ಅವುಗಳ ಬಳಕೆಯಿಂದ ನಿಮ್ಮ ತ್ವಚೆಯ ನೈಸರ್ಗಿಕ ಕಾಂತಿ ಕಳೆದುಕೊಳ್ಳಬಹುದು.
ಹೀಗಾಗಿ ಇಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೆ ಮನೆ ಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳುವುದು ಉತ್ತಮ.
ಹಾಗಿದ್ರೆ ಮೊಡವೆ ಸಮಸ್ಯೆಗಳನ್ನು ಸುಲಭವಾಗಿ ಹೇಗೆ ತಡೆಯುವುದು ಎಂಬುದನ್ನು ನಾವ ಹೇಳತ್ತೇವೆ ಕೇಳಿ.
ನಮ್ಮ ಚರ್ಮಗಳಿಗೆ ವಿಶೇಷ ಪೋಷಕಾಂಶಗಳ ಅಗತ್ಯವಿರುತ್ತದೆ. ಅವು ತೆಂಗಿನ ಹಾಲು ಹಾಗೂ ಅರಿಶಿನದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಇದರಿಂದ ತಯಾರಿಸಿದ ಪಾನೀಯವನ್ನು ತ್ವಚೆಯ ಮೇಲೆ ತೇಪಿಸುವುದರಿಂದ ಯೌವ್ವನವನ್ನು ಕಾಪಾಡಿಕೊಳ್ಳಬಹುದು.
ಹಾಗೆಯೇ ಮೊಡವೆಗಳಿಂದ ದೂರ ಉಳಿಯಬಹುದು.
ಇದಲ್ಲದೆ ನೀವು ಎರಡು ಬಾಳೆ ಹಣ್ಣು ಅಥವಾ ಅನಾನಸ್ ನ್ನು ಬಳಸಿ ಕೂಡ ಚರ್ಮದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಇದಕ್ಕೆ ತೆಂಗಿನ ಎಣ್ಣೆ, ದಾಲ್ಚಿನ್ನಿ ಪುಡಿ, ಶುಂಠಿ, ಅಗಸೆ ಪುಡಿ ಹಾಗೂ ಅರಿಶಿನ ಪುಡಿ ಸೇರಿಸಿ. ಹಾಗೆಯೇ ಅದರೊಂದಿಗೆ ತೆಂಗಿನ ಹಾಲನ್ನು ಬೆರೆಸಿ ಚೆನ್ನಾಗಿ ಬ್ಲೆಂಡರ್ ಮಾಡಿ.
ಈ ಮಿಶ್ರಣಕ್ಕೆ ತುಸು ಜೇನುತುಪ್ಪ ಸೇರಿಸಿ ಈ ಪಾನೀಯವನ್ನು ಕುಡಿಯಿರಿ.
ಇಲ್ಲಿ ಬಳಸುವ ತೆಂಗಿನ ಹಾಲಿನಲ್ಲಿ ಆರೋಗ್ಯಕರ ಕೊಬ್ಬು ಇರುತ್ತದೆ. ಹಾಗೆಯೇ ಅಗಸೆ ಬೀಜದಲ್ಲಿ ಒಮೆಗಾ ಆಮ್ಲ ಹೊಂದಿರುತ್ತದೆ.
ಶುಂಠಿ ಮತ್ತು ಅರಿಶಿನ ಉರಿಯೂತದ ನಿರ್ನಾಮ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ವಾರಕ್ಕೆ 2-3 ದಿನ ಹೀಗೆ ಮಾಡಿ ಕುಡಿಯುವುದರಿಂದ ಚರ್ಮಕ್ಕೆ ಬೇಕಾದ ಪೋಷಕಾಂಶಗಳನ್ನು ಪಡೆಯಬಹುದು.
ಹಾಗೆಯೇ ಮೊಡವೆ ಮುಕ್ತ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು.
PublicNext
28/10/2020 01:57 pm