ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ತಂದೂರಿ ಚಿಕನ್’ ಸುಲಭವಾಗಿ ಮಾಡುವ ವಿಧಾನ

ತಂದೂರಿ ಎಂದರೆ ಚಿಕನ್ ಪ್ರಿಯರ ಬಾಯಲ್ಲಿ ನೀರು ಬರುತ್ತದೆ.

ಮನೆಯಲ್ಲಿಯೇ ತಂದೂರಿ ಚಿಕನ್ ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು:

ಚಿಕನ್ ನ ಹೋಲ್ ಲೆಗ್ ಪೀಸ್ – 2, ಲಿಂಬೆ ರಸ – 3 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಕಾಳುಮೆಣಸಿನ ಪುಡಿ – 1 ಟೀ ಸ್ಪೂನ್, ಖಾರದ ಪುಡಿ – 2 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಧನಿಯಾ ಪುಡಿ – 1/2 ಸ್ಪೂನ್, ಎಣ್ಣೆ – 4 ಟೇಬಲ್ ಸ್ಪೂನ್., ಬೆಣ್ಣೆ – 2 ಚಮಚ, ಮೊಸರು – 2 ಟೇಬಲ್ ಸ್ಪೂನ್, ತಂದೂರಿ ಚಿಕನ್ ಮಸಾಲ – 2 ಚಮಚ.

ಮೊದಲಿಗೆ ಚಿಕನ್ ಅನ್ನು ಚೆನ್ನಾಗಿ ತೊಳೆದು ಸ್ವಚ್ಚಗೊಳಿಸಿ ಒಂದು ಅಗಲವಾದ ಪಾತ್ರೆಗೆ ಹಾಕಿಕೊಂಡು ಅದಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿ, ಉಪ್ಪು, ಲಿಂಬೆಹಣ್ಣಿನ ರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 15 ನಿಮಿಷ ಹಾಗೇ ಬಿಟ್ಟುಬಿಡಿ.

ನಂತರ ಒಂದು ಪಾತ್ರೆಗೆ ಮೊಸರು, ಧನಿಯಾ ಪುಡಿ, ಖಾರದ ಪುಡಿ, ಉಪ್ಪು, ತಂದೂರಿ ಚಿಕನ್ ಮಸಾಲ ಪುಡಿ – 2 ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಚಿಕನ್ ಗೆ ಹಾಕಿ ಮಿಕ್ಸ್ ಮಾಡಿ. 4 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ.

ನಂತರ ಹೊರ ತೆಗೆದು 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಚಿಕನ್ ಪೀಸ್ ಹಾಕಿ ಹದ ಉರಿಯಲ್ಲಿ 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಸ್ವಲ್ಪ ಬೆಣ್ಣೆ ಕೂಡ ಸೇರಿಸಿ.

ತಳ ಹತ್ತದಂತೆ ಎರಡು ಕಡೆ ಚೆನ್ನಾಗಿ ತಿರುವಿ ಹಾಕಿ. ತಂದೂರಿ ಸ್ಟ್ಯಾಂಡ್ ಗೆ ಚಿಕನ್ ಪೀಸ್ ಹಾಕಿ ಮೇಲುಗಡೆ ಸ್ವಲ್ಪ ಬೆಣ್ಣೆ ಹಚ್ಚಿ 3 ನಿಮಿಷಗಳ ಕಾಲ ಗ್ಯಾಸ್ ಮೇಲೆ ಇಟ್ಟು ಬೇಯಿಸಿಕೊಂಡರೆ ರುಚಿಕರವಾದ ತಂದೂರಿ ಚಿಕನ್ ಸವಿಯಲು ಸಿದ್ಧ.

Edited By : Nirmala Aralikatti
PublicNext

PublicNext

13/10/2020 02:36 pm

Cinque Terre

23.33 K

Cinque Terre

1