ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಜನಾದ್ರಿ ಹುಂಡಿಯಲ್ಲಿ ವಿದೇಶಿ ಹಣ ಸೇರಿ 18.69 ಲಕ್ಷ ರೂ.ಸಂಗ್ರಹ

ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ದೇವಾಲಯ ಹುಂಡಿಯಲ್ಲಿ 18.69 ಲಕ್ಷ ರೂ. ಸಂಗ್ರಹವಾಗಿದ್ದು, ವಿದೇಶಿ ನಾಣ್ಯ ಮತ್ತು ಕರೆನ್ಸಿ ದೊರೆತಿವೆ. ಮುಜರಾಯಿ ಇಲಾಖೆಗೊಳಪಡುವ ದೇವಾಲಯಕ್ಕೆ ದಿನೇ ದಿನೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ತಿಂಗಳಿಗೊಮ್ಮೆ ಹುಂಡಿ ತೆರೆಯುವಂತೆ ಸರ್ಕಾರ ಆದೇಶಿಸಿದೆ.

ಈ ಹಿನ್ನೆಲೆ ಹುಂಡಿ ತೆರೆದಿದ್ದು, 42 ದಿನಗಳಲ್ಲಿ 18,69, 769ರೂ. ಸಂಗ್ರಹವಾಗಿದ್ದು, ಥೈಲ್ಯಾಂಡ್, ಸೌದಿ ಅರೇಬಿಯಾ, ಹಂಗೇರಿ, ಓಮನ್ ಮತ್ತು ನೇಪಾಳದ 3 ನಾಣ್ಯ ಹಾಗೂ 2 ನೋಟುಗಳಿವೆ ದೊರೆತಿವೆ. ಈ ಕುರಿತು ಗ್ರೇಡ್-2 ತಹಸೀಲ್ದಾರ್ ವಿ.ಎಚ್. ಹೊರಪೇಟೆ ಮಾತನಾಡಿ, ಸಿಸಿ ಕ್ಯಾಮರಾ ಕಣ್ಣಾವಲಿನಲ್ಲಿ ಕಂದಾಯ ಮತ್ತು ಪಿಕೆಜಿ ಬ್ಯಾಂಕ್‌ ಸಿಬ್ಬಂದಿ ಸಮ್ಮುಖದಲ್ಲಿ ಹುಂಡಿ ತೆರೆಯಲಾಗಿದ್ದು, ಎಣಿಕೆ ಸಂದರ್ಭದಲ್ಲಿ ಭಕ್ತರು ಸಹಕರಿಸಿದ್ದಾರೆ. ಎಣಿಕೆ ಹಣವನ್ನು ಪಿಕೆಜಿ ಬ್ಯಾಂಕ್‌ನಲ್ಲಿ ಜಮೆ ಮಾಡಲಾಗಿದೆ. ಭಕ್ತರಿಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಹುಂಡಿ ತೆರೆದಾಗ 21.44 ಲಕ್ಷ ರೂ. ಸಂಗ್ರಹವಾಗಿತ್ತು ಎಂದರು.

ಶಿರಸ್ತೇದಾರರಾದ ಅನಂತಜೋಶಿ, ರವಿಕುಮಾರ ನಾಯಕ್ವಾಡಿ, ಕೃಷ್ಣವೇಣಿ, ಮಹೆಬೂಬ್‌ ಅಲಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ವಿಎಗಳಾದ ಮಹಾಲಕ್ಷ್ಮಿ ನಾಯಕ, ಮಂಜುನಾಥ ದುಮ್ಮಾಡಿ, ಅಭಿಷೇಕ, ದೇವಾಲಯ ವ್ಯವಸ್ಥಾಪಕ ಎಂ.ವೆಂಕಟೇಶ ಇತರರಿದ್ದರು.

Edited By : Nirmala Aralikatti
Kshetra Samachara

Kshetra Samachara

13/10/2022 12:59 pm

Cinque Terre

2.66 K

Cinque Terre

0