ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾವು ಜಗ್ಗುವುದಿಲ್ಲ ಎಂದು ಸಿಎಫ್ಐ ರಾಜ್ಯ ಕಾರ್ಯದರ್ಶಿ ಸೈಯ್ಯದ ಸರ್ಫರಾಜ್ ಗಂಗಾವತಿ ಹೇಳಿದ್ದಾರೆ.
ಸರ್ಫರಾಜ್ ಮತ್ತು ರಸೂಲ್‌ರನ್ನು ಗಂಗಾವತಿಯಲ್ಲಿ ಬಂಧಿಸಿರೋ ಪೊಲೀಸರು, ಕೊಪ್ಪಳ ಉಪ ವಿಭಾಗಾಧಿಕಾರಿ ಮುಂದೆ ಹಾಜರುಪಡಿಸಲು ಕರೆ ತಂದಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಮಾತನಾಡಿರುವ ಸರ್ಫರಾಜ್, ಇದಕ್ಕೆಲ್ಲ ನಾವು ಜಗ್ಗುವುದಿಲ್ಲ ಎಂದಿದ್ದಾರೆ. ಅಷ್ಟರಲ್ಲೇ ಪೊಲೀಸರು ಸರ್ಫರಾಜ್‌ರನ್ನ ಡೈವರ್ಟ್ ಮಾಡಿದ್ದು, ಮಾತು ಮುಂದುವರೆಸಲು ಅವಕಾಶ ನೀಡಿಲ್ಲ.
PublicNext
27/09/2022 11:59 am