ಕೊಪ್ಪಳ: ಕುಷ್ಟಗಿ ಜನ ಸಾಗರವನ್ನು ನೋಡಿ ಖುಷಿ ಆಯ್ತು. ಯಾವುದೇ ಶಕ್ತಿ ದೊಡ್ಡನಗೌಡ ಪಾಟೀಲ್‌ರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಜನಸಂಕಲ್ಪ ಯಾತ್ರೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ಬಿಜೆಪಿ ದೇಶದುದ್ದಕ್ಕೂ ಬೆಳೆಯುತ್ತಿದೆ. ಕಾಂಗ್ರೆಸ್ ಹಣ, ಜಾತಿ, ಹೆಂಡದ ಬಲದಿಂದ ಚುನಾವಣೆ ಗೆಲ್ಲುವ ಕನಸು ಕಾಣ್ತಿದೆ. ಆದ್ರೆ, ಜನ ಈ ಬಾರಿ ಕಾಂಗ್ರೆಸ್‌ಗೆ ಪಾಠ ಕಲಿಸಬೇಕಿದೆ. ಬಿಜೆಪಿ ಈ ಬಾರಿ 150 ಸೀಟು ಗೆಲ್ಲುವುದು ನಿಶ್ಚಿತ. ತುಂಬಿ ತುಳುಕುವ ಈ ಸಭೆಯನ್ನು ನೋಡಿದಾಗ ಬಿಜೆಪಿ ಗೆಲುವು ನಿಶ್ಚಿತ. ಮಳೆ ಬಂದ್ರೂ ಕಾದು ಕುಳಿತಿದ್ದೀರಿ ನಿಮಗೆ ಧನ್ಯವಾದಗಳು ಎಂದರು.
ಇನ್ನೂಸಿದ್ದರಾಮಯ್ಯ, ಡಿಕೆಶಿ ಜೋಡಿಯ ಆಟ ನಡೆಯುವುದಿಲ್ಲ. ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಕರೆ ತಂದಿದ್ದಾರೆ. ಪಾದಯಾತ್ರೆಯಿಂದ ನಿಮ್ಮ ಆರೋಗ್ಯ ಸುಧಾರಿಸಬಹುದು. ಮತ್ತೇನು ಸಾಧನೆ ಆಗುವುದಿಲ್ಲ ಎಂದು ರಾಹುಲ್ ಗಾಂಧಿ ವಿರುದ್ಧ ಟೀಕಿಸಿದರು. ಕಾಂಗ್ರೆಸ್‌ಗೆ ಎಸ್‌ಸಿ/ಎಸ್‌ಟಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅಂಬೇಡ್ಕರ್ ಇದ್ದಾಗ ಅವರಿಗೆ ಒಂದು ಟಿಕೇಟ್ ಕೊಡಲಿಲ್ಲ. ಕೊಟ್ಟರೂ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್. ಅವರ ಶವ ಸಂಸ್ಕಾರಕ್ಕೆ ದೆಹಲಿಯಲ್ಲಿ ಅವಕಾಶ ನೀಡಲಿಲ್ಲ ಎಂದರು.
ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೇವೆ. ಬಿಜೆಪಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ವಿಶ್ರಮಿಸದೇ ಕೆಲಸ ಮಾಡಬೇಕಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಯಾರೆ ಬಂದರೂ ಕರ್ನಾಟಕ ಬಿಜೆಪಿಯನ್ನು ಬಿಟ್ಟು ಕೊಡುವುದಿಲ್ಲ. ಬಿಜೆಪಿ ನಾಯಕರು ಚುನಾವಣೆ ಮುಗಿಯುವವರೆಗೆ ವಿಶ್ರಮಿಸುವುದಿಲ್ಲ ಎಂದರು.
PublicNext
12/10/2022 09:31 pm