ಕೊಪ್ಪಳ: ಕಾಂಗ್ರೆಸ್ ಹುಚ್ಚು ಕಲ್ಪನೆಯನ್ನಿಟ್ಟು ಭಾರತ್ ಜೋಡೋ ಯಾತ್ರೆ ಆರಂಭಿಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರು ಲೇವಡಿ ಮಾಡಿದರು.
ಜಿಲ್ಲೆಯ ಕುಷ್ಟಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಹುಚ್ಚು ಕಲ್ಪನೆಯನ್ನಿಟ್ಟು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಡೆ ಕೃಷ್ಣೆ ಕಡೆಗೆ ಎಂದು ಪೊಳ್ಳು ಭರವಸೆ ನೀಡಿದ್ದರು. ಈಗ ಯಾತ್ರೆ ಆರಂಭಿಸಿದ್ದಾರೆ. ಇವೆಲ್ಲ ಏನೂ ನಡೆಯಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ ಎಂದರು.
ಜಿಲ್ಲೆಯಲ್ಲಿ ಆರು ಜನರು ಸತ್ತಿದ್ದಾರೆ. ಆದರೆ ಉಸ್ತುವಾರಿ ಸಚಿವರು ಬಂದಿಲ್ಲ ಎಂಬ ಪ್ರಶ್ನೆಗೆ ನಾವೆಲ್ಲ ಇದ್ದೇವೆ ಎಂದಿದ್ದಾರೆ. ಎಸ್ಟಿ ಜನಾಂಗಕ್ಕೆ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದರು.
PublicNext
12/10/2022 07:45 pm