ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಸಿಡಿಲು ಸಹಿತ ಭಾರಿ ಮಳೆ; ಸಿಎಂ ಕುಷ್ಟಗಿ ಹೆಲಿಕಾಪ್ಟರ್ ಯಾನ ರದ್ದು

ಕೊಪ್ಪಳ: ಇಂದು ಕೊಪ್ಪಳದ ಕುಷ್ಟಗಿಗೆ ಸಿಎಂ ಹೆಲಿಕಾಪ್ಟರ್ ಮೂಲಕ ಆಗಮಿಸಬೇಕಾಗಿತ್ತು. ಆದರೆ, ಇದೀಗ ಮಳೆಯಿಂದಾಗಿ ವಿಜಯನಗರದಿಂದ ಕುಷ್ಟಗಿ ಹೆಲಿಕಾಪ್ಟರ್ ಪ್ರಯಾಣ ರದ್ದಾಗಿದೆ.

ಗುಡುಗು, ಮಿಂಚು- ಸಿಡಿಲಿನಿಂದ ಸಿಎಂ ಹೆಲಿಕಾಪ್ಟರ್ ಪ್ರಯಾಣ ರದ್ದಾಗಿದ್ದು, ರಸ್ತೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲಿದ್ದಾರೆ. ಕುಷ್ಟಗಿಯಲ್ಲಿ ಜನ ಸಂಕಲ್ಪ ಯಾತ್ರೆ ನಡೆಯುತ್ತಿದೆ. ಹೆಲಿಕಾಪ್ಟರ್ ಪ್ರಯಾಣ ರದ್ದಾಗಿದ್ದರಿಂದ ಕಾರ್ಯಕ್ರಮ ಸ್ವಲ್ಪ ತಡವಾಗಿ ಪ್ರಾರಂಭವಾಗುವ ನಿರೀಕ್ಷೆ ಇದೆ.

ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗಾಗಿ ಹೆಲಿಪ್ಯಾಡ್ ಬಳಿ ಕಾದಿದ್ದ ಜನರಿಗೆ ನಿರಾಶೆಯಾಗಿದ್ದು, ವಿವಿಧ ಅಹವಾಲು ಹೊತ್ತು ತಂದಿದ್ದ ಸಾರ್ವಜನಿಕರು ವಿಷಾದದಿಂದಲೇ ಹೊರನಡೆದರು.

Edited By : Nagesh Gaonkar
PublicNext

PublicNext

12/10/2022 04:52 pm

Cinque Terre

24.5 K

Cinque Terre

0