ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ : ಶಿವರಾಜ ತಂಗಡಗಿ ನಂಬರ್ ಒನ್ ಸುಳ್ಳುಗಾರ; ದಡೇಸೂಗೂರು

ಕೊಪ್ಪಳ : ಮಾಜಿ ಸಚಿವ ಶಿವರಾಜ ತಂಗಡಗಿ ರಾಜ್ಯದಲ್ಲಿಯೇ ನಂಬರ್ ಒನ್ ಸುಳ್ಳುಗಾರ ಎಂದುಕನಕಗಿರಿ ಹಾಲಿ ಶಾಸಕ ಬಸವರಾಜ ದಡೇಸಗೂರು ಹೇಳಿಕೆ ನೀಡಿದ್ದಾರೆ. ಶಿವರಾಜ ತಂಗಡಗಿಯಿಂದಾಗಿ ಸಣ್ಣ ನೀರಾವರಿ ಇಲಾಖೆಯ ಇಂಜನಿಯರ್ ಕುಟುಂಬಗಳು ಕಣ್ಣೀರು ಹಾಕುತ್ತಿವೆ.ಸಣ್ಣ ನೀರಾವರಿ ಸಚಿವರಾಗಿದ್ದಾಗ 40 ಕೋಟಿ ರೂಪಾಯಿ ಅವ್ಯವಾಹಾರವಾಗಿದೆ.

ಈ ಸಂದರ್ಭದಲ್ಲಿ 26 ಜನ ಇಂಜನಿಯರ್‌ಗಳು ಅಮಾನತ್ತಾಗಿದ್ದರು, 56 ಗುತ್ತಿಗೆದಾರರ ಬ್ಲಾಕ್ ಲಿಸ್ಟ್ ಸೇರಿದ್ದರು, ತಮ್ಮ ಜಿಲ್ಲೆ, ತಮ್ಮ ಖಾತೆಯಲ್ಲಿ ಹಣ ತೆಗೆದುಕೊಂಡು ಮನೆಯಲ್ಲಿಟ್ಟುಕೊಂಡಿದ್ದರು. ಒತ್ತಾಯಪೂರ್ವಕವಾಗಿ ಬಿಲ್ ಬರೆಸಿಕೊಂಡು ಮನೆಯಲ್ಲಿ ದುಡ್ಡು ಇಟ್ಟುಕೊಂಡರು. ಪಾಪ ಇಂಜನಿಯರ್ ಗುತ್ತಿಗೆದಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

ರಾಜ್ಯ 224 ಕ್ಷೇತ್ರಗಳಲ್ಲಿ 248 ಜನರಲ್ಲಿ ನಂಬರ್ ಒನ್ ಸುಳ್ಳುಗಾರ ಎಂದರೆ ತಂಗಡಗಿ ಎಂದರು. ಬಳ್ಳಾರಿಯಲ್ಲಿ ಭಾರತ ಜೋಡೊ ಯಾತ್ರೆಗೆ ಕಾಂಗ್ರೆಸನವರು 8 ಲಕ್ಷ ಜನ ಸೇರಿಸುತ್ತೇನೆ ಎನ್ನುತ್ತಿದ್ದಾರೆ. ತಾಕತ್ತು ಇದ್ದರೆ ಕನಕಗಿರಿಯಲ್ಲಿ ಸಮಾವೇಶ ಮಾಡಬೇಕಿತ್ತು

ಯಾತ್ರೆಯನ್ನು ಹೊಸಪೇಟೆ, ಗಂಗಾವತಿ ಕನಕಗಿರಿ ಮಾರ್ಗವಾಗಿ ಹೋಗುವಂತೆ ಮಾಡಬೇಕಿತ್ತು. ಕೇವಲ ಸುಳ್ಳು ಹೇಳುವದರಲ್ಲಿ ತೊಡಗಿದ್ದಾರೆ ಎಂದು ದಡೇಸಗೂರು ಹೇಳಿಕೆ ನೀಡಿದರು.

Edited By : Manjunath H D
PublicNext

PublicNext

11/10/2022 09:25 pm

Cinque Terre

33.06 K

Cinque Terre

0