ಕೊಪ್ಪಳ : ಕೇಂದ್ರ ಸರಕಾರದಿಂದ ಪಿಎಫ್ಐ ನಿಷೇಧ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ನಿರ್ಧಾರವನ್ನು ಸಂಸದ ಕರಡಿ ಸಂಗಣ್ಣ ಸ್ವಾಗತ ಮಾಡಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು,PFI ರಾಷ್ಟ್ರದಲ್ಲಿ ದುಷ್ಕೃತ್ಯ ಮಾಡುವ ಸಂಸ್ಥೆಯಾಗಿದ್ದು,ಬಿಹಾರದಲ್ಲಿ ಒಂದು ತರಬೇತಿ ಸಂಸ್ಥೆ ನಡೆಸುತ್ತಿದ್ದರು.
ಈ ಸಂಘಟನೆಯಲ್ಲಿ 15 ಸಾವಿರ ಯವಕರು ತೊಡಗಿದ್ದು, ಜನರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದರು.ಇನ್ನು 2047 ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಸಂಕಲ್ಪ ಮಾಡಿದ್ದರು.ಈ ದೇಶದ ನೀರು,ಅನ್ನ ಸೇವಿಸಿ ಈ ದೇಶದಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿದ್ದರು.ಇದರಿಂದ ಕೇಂದ್ರ ಸರಕಾರ ಒಳ್ಳೆಯ ನಿರ್ಣಯ ಮಾಡಿದೆ ಎಂದರು.
ಇನ್ನು ಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ ಪಿಎಫ್ ಐ ನಿಷೇಧ ಮಾಡಿದೆ ಎಂದು ಕಾಂಗ್ರೆಸ್ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಗಣ್ಣ ಕರಡಿ, ಚುನಾವಣೆ ದೃಷ್ಟಿ ಇಟ್ಟುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ.ಈ ದೇಶ ಉಳಿಯಬೇಕಾಗಿದೆ. ಒಮ್ಮೇ ಬಿಜೆಪಿ ಗೆಲ್ಲಬಹುದು,ಒಮ್ಮೆ ಕಾಂಗ್ರೆಸ್ ಗೆಲ್ಲಬಹುದು.
ಆದರೆ ಈ ರೀತಿ ಆರೋಪ ಮಾಡಿ ಆ ಜನಾಂಗದ ಮತಗಳನ್ನು ಗಳಿಸುವ ಪಿತೂರಿ ಕಾಂಗ್ರೆಸ್ ಮಾಡುತ್ತಿದೆ.ಈ ಹಿಂದೆ ಪಿಎಫ್ ಐ ಸಂಘಟನೆ ಮುಖಂಡರ ಮೇಲಿನ ಕೇಸ್ ಗಳನ್ನು ಕಾಂಗ್ರೆಸ್ ಹಿಂದಕ್ಕೆ ಪಡೆಯಿತು. ಪರೋಕ್ಷವಾಗಿ ಸಿದ್ದರಾಮಯ್ಯ ಸಪೋರ್ಟ್ ಮಾಡಿದ್ದರು.
ರಾಷ್ಟ್ರದೋಹಿ ಕೆಲಸ ಮಾಡುವ ಸಂಘಟನೆಗಳನ್ನು ನಿಷೇಧ ಮಾಡಬೇಕು. ಪಕ್ಷ ಯಾವುದೇ ಬರಬಹುದು, ನಮ್ಮ ದೇಶ,ಜನರನ್ನು ಉಳಿಸಿಕೊಳ್ಳಬೇಕು ಎಂದರು.
PublicNext
28/09/2022 01:23 pm