ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಶಂಕಿತ ಉಗ್ರನ ಬಂಧನ ಹಿನ್ನೆಲೆ ಗಂಗಾವತಿಯಲ್ಲಿ ಶಾಸಕ ಪರಣ್ಣ ಮನವಳ್ಳಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಂಗಾವತಿಯಲ್ಲಿ ಇನ್ನು ಕೆಲವು ಜನ ಶಂಕಿತ ಉಗ್ರರು ಇರೋ ಅನುಮಾನ ಇದೆ. ಇದರಿಂದ ಜನತೆ ಇದರಿಂದ ಭಯಭೀತರಾಗಿದ್ದಾರೆ. ಪೊಲೀಸರು, ಉನ್ನತ ತನಿಖಾ ತಂಡ ತನಿಖೆ ನಡೆಸಬೇಕು. ಶಾಂತಿ ಕದಡುವ ನಿಟ್ಟಿನಲ್ಲಿ ಕೆಲವರು ದುಷ್ಕೃತ್ಯ ನಡೆಸುವ ಅನುಮಾನ ಇದೆ. ಪೊಲೀಸ್ ಇಲಾಖೆ ಈ ಬಗ್ಗೆ ವಿಶೇಷ ಕಾರ್ಯಚರಣೆ ಮಾಡಬೇಕು. ಎನ್.ಐ.ಎ ತಂಡ ಸೇರಿದಂತೆ ಉನ್ನತ ತನಿಖಾ ತಂಡದಿಂದ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
PublicNext
26/09/2022 10:44 am