ಕೊಪ್ಪಳ : ದೇಶಾದ್ಯಂತ NIA ದಾಳಿಯಲ್ಲಿ SDPI, PFI ಕಾರ್ಯಕರ್ತರ ಬಂಧನ ಖಂಡಿಸಿ ಕೊಪ್ಪಳದ ಆಶೋಕ ವೃತ್ತದಲ್ಲಿ SDPI , PFI ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಕೊಪ್ಪಳದ ಗಂಗಾವತಿಯ ಫಯಾಜ್ ನನ್ನು ಬಂಧಿಸಿದ ಹಿನ್ನೆಲೆ ಇಸ್ಲಾಂ ಸಂಘಟನೆಗಳ ಕಾರ್ಯಕರ್ತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಪೊಲೀಸರೊಂದಿಗೆ ಪಿಎಫ್ ಐ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ್ದು ಕಂಡು ಬಂತು. ಅಲ್ಲದೇ ಮಾನವ ಸರಪಳಿ ರಚಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
PublicNext
22/09/2022 04:04 pm