ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಸಚಿವರಿಂದಲೇ ನಿಯಮ ಉಲ್ಲಂಘನೆ: ಸರ್ಕಾರಿ ನೌಕರಿಗೆ ಯೋಜನೆ ನೀಡಿದ ಹಾಲಪ್ಪ ಆಚಾರ್

ಕೊಪ್ಪಳ: ಮಾತೆತ್ತಿದ್ದರೆ ನಿಯಮ ಬಿಟ್ಟು ನಾನು ಏನೂ ಮಾಡೋಲ್ಲ ಎನ್ನುವ ಸಚಿವ ಹಾಲಪ್ಪ ಆಚಾರ್ ಅವರು ತಾವೇ ನಿಯಮ ಉಲ್ಲಂಘನೆ ಮಾಡಿ ತಮ್ಮ ಕೈಯಾರೆ ಸರ್ಕಾರಿ ನೌಕರರಿಗೆ ಯೋಜನೆ ನೀಡಿದ್ದಾರೆ.

ಹೌದು‌ ಸರಕಾರಿ ಶಾಲೆಯ ಮುಖ್ಯ ಶಿಕ್ಷಕನಿಗೆ ಇದೀಗ ಸಚಿವರು ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸೌಲಭ್ಯ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ಸಚಿವ ಹಾಲಪ್ಪ ಆಚಾರ್ ರಿಂದ ನಿಯಮ ಉಲ್ಲಂಘನೆಯಾಗಿದ್ದು, ಕೊಪ್ಪಳ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮದಲ್ಲಿ ಮುಖ್ಯ ಶಿಕ್ಷಕನಿಗೆ ಕೊಳವೆ ಬಾಯಿ ಸೌಲಭ್ಯ ನೀಡಿದ್ದಾರೆ. ಮುರಡಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಕನಕರಾಯ ಗಡಾದ ಎನ್ನುವರಿಗೆ ಕೊಳವೆ ಸೌಲಭ್ಯ ನೀಡಿದ್ದಾರೆ. ಇನ್ನೂ

ಕನಕರಾಯ ಗಡಾದ ಪುತ್ರ ಶಶಿಧರ್ ಬಿಜೆಪಿ ಸಕ್ರಿಯ ಕಾರ್ಯಕರ್ತನಾಗಿದ್ದು, ಈ ಕಾರಣಕ್ಕಾಗಿಯೇ ಸೌಲಭ್ಯ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ನಿಯಮದ ಪ್ರಕಾರ ಸರಕಾರಿ ನೌಕರರಿಗೆ ಕೊಳವೆ ಬಾಯಿ ಸೌಲಭ್ಯ ನೀಡಲು ಬರುವುದಿಲ್ಲ. ಆದರೆ ನಿಯಮ ಉಲ್ಲಂಘಿಸಿ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಸ್ವತಃ ತಾವೇ ಆಯ್ಕೆ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

21/09/2022 02:52 pm

Cinque Terre

9.62 K

Cinque Terre

0