ಕೊಪ್ಪಳ: ರಾಜ್ಯದಲ್ಲಿ ಬಾಣಂತಿಯರ ಸಾವು ನಿಲ್ಲುವಂತೆ ಕಾಣುತ್ತಿಲ್ಲ. ಕೊಪ್ಪಳದಲ್ಲೂ ನಿನ್ನೆ ಬೆಳಿಗ್ಗೆ ಬಾಣಂತಿಯೊಬ್ಬರು ಸಾವನ್ನಪ್ಪಿದ್ದಾರೆ..
ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಾಣಂತಿ ಕೊಪ್ಪಳದ ಕುಕನೂರು ತಾಲೂಕಿನ ಆಡೂರ್ ಗ್ರಾಮದ ನಿವಾಸಿ ರೇಣುಕಾ ಪ್ರಕಾಶ್ ಹಿರೇಮನಿ ಅಂತ ತಿಳಿದು ಬಂದಿದೆ.
ರೇಣುಕಾ ಅವರನ್ನು ಮೊನ್ನೆ ರಾತ್ರಿ ಕುಷ್ಟಗಿ ತಾಲೂಕು ಆಸ್ಪತ್ರೆಯಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾ ಆಸ್ಪತ್ರೆಯಲ್ಲಿ ನಿನ್ನೆ ಬೆಳಿಗ್ಗೆ 2:30ಕ್ಕೆ ರೇಣುಕಾ ಮಗುವಿಗೆ ಜನ್ಮ ನೀಡಿದ್ದರು. ಆದ್ರೆ ಮಗು ಸಾವನ್ನಪ್ಪಿದ್ದು ನಂತರ ಬೆಳಗ್ಗೆ 5:30ಕ್ಕೆ ರೇಣುಕಾ ಕೂಡ ಸಾವನ್ನಪ್ಪಿದ್ದಾರೆ. ಸಾವಿನ ಬಗ್ಗೆ ಕುಟುಂಬಕ್ಕೆ ನಿಖರ ಮಾಹಿತಿಯನ್ನು ವೈದ್ಯರು ನೀಡದ ಆರೋಪ ಕೂಡಾ ಇದೆ. ಜೊತೆಗೆ ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಅಂತ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ್ ಕೂಡ ಆರೋಪ ಮಾಡಿದ್ದಾರೆ.
PublicNext
01/01/2025 10:27 am