ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಗ್ರಾಮದ ಬಳಿ ಎರಡು ಚಿರತೆಗಳು ಪ್ರತ್ಯಕ್ಷ: ಭಯಗೊಂಡ ಗ್ರಾಮಸ್ಥರು

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಬಸವನದುರ್ಗಾ ಕಡೆಬಾಗಿಲು ಗ್ರಾಮಗಳ ಮಧ್ಯ ಇರುವ ಕುದುರೆಮುಖ ಹುಲಿಗೆಮ್ಮ ದೇವಸ್ಥಾನದ ಸಮೀಪದ ಬೆಟ್ಟದಲ್ಲಿ ಬುಧವಾರ ಜೋಡಿ ಚಿರತೆ ಪ್ರತ್ಯಕ್ಷವಾಗಿದೆ.

ಗಂಗಾವತಿಯಿಂದ ಆನೆಗೊಂದಿಗೆ ಹೋಗುವ ಮಾರ್ಗ ಮಧ್ಯೆ ಬರುವ ಬೆಟ್ಟದ ಸ್ಥಳದಲ್ಲಿ ಬೆಳಗ್ಗೆ ಜೋಡಿ ಚಿರತೆ ಕಂಡು ಬಂದಿವೆ. ಒಂದು ಬೆಟ್ಟದ ಕಲ್ಲಿನ‌ ತುದಿಯೊಂದರ ಮೇಲೆ ನಿಂತಿದ್ದು, ಮತ್ತೊಂದು ಅದೇ ಬೆಟ್ಟದ ಕಲ್ಲಿನ ಕೆಳಗೆ ಇಳಿದು ಅತ್ತಿಂದಿತ್ತ ಓಡಾಡುವ ದೃಶ್ಯ ಬಂದಿವೆ. ಸುಮಾರು ಐದು ನಿಮಿಷಕ್ಕೂ ಹೆಚ್ಚು ಕಾಲ ಕಾಣಿಸಿರುವ ಜೋಡಿ ಚಿರತೆಗಳ ದೃಶ್ಯವನ್ನು ದಾರಿಹೋಕರೊಬ್ಬರು ಚಿತ್ರಿಸಿದ್ದಾರೆ. ಇದರಿಂದ ಗಂಗಾವತಿ-ಹುಲಿಗಿ ಮಧ್ಯ ಸಂಚರಿಸುವ ದ್ವಿಚಕ್ರ ವಾಹನ ಸವಾರರಲ್ಲಿ ಆತಂಕ ಮನೆ ಮಾಡಿದೆ.

Edited By : Nagesh Gaonkar
PublicNext

PublicNext

07/10/2022 10:18 pm

Cinque Terre

33.68 K

Cinque Terre

1