ಕೊಪ್ಪಳ : ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳ್ಳ-ಕೊಳ್ಳಗಳು. ತುಂಬಿ ಹರಿಯುತ್ತಿದ್ದು ಸೇತುವೆ ಮೇಲೆ ನೀರು ಹರಿಯುತ್ತಿದ್ರೂ ಲೆಕ್ಕಿಸದೇ ಬೈಕ್ ಸವಾರರು ಸೇತುವೆ ಮೇಲೆ ಬೈಕ್ ಚಲಾಯಿಸಿಕೊಂಡ ಹೋಗಿದ್ರು. ಇದರಿಂದ ಎರೆಡು ಬೈಕ್ ಹಳ್ಳದ ಪಾಲಾಗಿವೆ.
ಹಳ್ಳದ ಪಾಲಾದ ಬೈಕ್'ಗಳನ್ನು ಗ್ರಾಮಸ್ಥರು ನೀರಿನಲ್ಲಿ ಮುಳಗಿ ಶೋಧ ಕಾರ್ಯ ನಡೆಸಿ ಬೈಕ್ ಎತ್ತಿಕೊಂಡ ಬಂದಿದ್ದಾರೆ.
ಕೊಪ್ಪಳ ಜಿಲ್ಲೆಯ ಶಿವಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
PublicNext
01/10/2022 05:20 pm