ಕೊಪ್ಪಳ: ಹಳ್ಳದ ಪ್ರವಾಹ ದಾಟಲು ಕೆಲ ಗ್ರಾಮಸ್ಥರು ಜೆಸಿಬಿ ಬಳಸಿ ಹುಚ್ಚು ಸಾಹಸ ಪ್ರದರ್ಶಿಸಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಂಡ್ರಗಲ್ ಹಳ್ಳದಲ್ಲಿ ನಡೆದಿದೆ.
ಕಾಟಾಪೂರ, ಕಬ್ಬರಗಿ, ಬೀಳಗಿ, ಬಂಡ್ರಗಲ್ ಪ್ರದೇಶದಲ್ಲಿ ಅ.12ರ ಬುಧವಾರ ಮಧ್ಯಾಹ್ನ ಗುಡುಗು ಸಿಡಿಲಬ್ಬರದ ಜೊತೆಗೆ ಭಾರಿ ಮಳೆಯಾಗಿದೆ. ಈ ಮಳೆಗೆ ಕಬ್ಬರಗಿಯ ಜಾತಿಗ್ಯಾನ, ಬಂಡ್ರಗಲ್ ಹಳ್ಳಗಳಲ್ಲಿ ನೀರು ಉಕ್ಕಿ ಹರಿದಿವೆ. ಬಂಡ್ರಗಲ್ ಹಳ್ಳ ಏರಿ ಬಂದ ಹಳ್ಳದ ಪ್ರವಾಹದಲ್ಲಿ ಕೆಲವರು ಜೆಸಿಬಿ ಬಕೇಟ್‌ನಲ್ಲಿ ಹಳ್ಳದ ಪ್ರವಾಹ ಲೆಕ್ಕಿಸದೇ ಹಳ್ಳದಾಟಿದ್ದಾರೆ.
ಜೆಸಿಬಿಯಲ್ಲಿ ಹಳ್ಳ ದಾಟುವುದನ್ನು ಹಳ್ಳದ ದಡದಲ್ಲಿದ್ದವರು ವಿಡಿಯೋ ಮಾಡಿದ್ದು, ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಯಲಬುರ್ಗಾ ತಾಲೂಕಿನ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಪೊಲೀಸರು ಹಾಗೂ ನಾಲ್ವರು ಮಹಿಳೆಯರು ಹಳ್ಳ ದಾಟುವ ಪ್ರಯತ್ನ ಮಾಡಿ ಹಳ್ಳದ ಪ್ರವಾಹಕ್ಕೆ ಸಿಲುಕಿ ದುರಂತ ಸಾವಿಗೆ ಕಾರಣವಾಗಿತ್ತು. ಈ ದುರಂತ ಮಾಸುವ ಮುನ್ನವೇ ಕುಷ್ಟಗಿ ತಾಲೂಕಿನ ಬಂಡ್ರಗಲ್ ಹಳ್ಳದಲ್ಲಿ ಸ್ಥಳೀಯರು ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು, ಯಾವುದೇ ದುರಂತ ನಡೆಯದೇ ಇರುವುದು ಸಮಧಾನಕರ ವಿಷಯ ಎನ್ನಬಹುದು..
PublicNext
13/10/2022 12:43 pm