ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಜೀವದ ಹಂಗು ತೊರೆದು ಶಾಲೆಗೆ ತೆರಳುವ ವಿದ್ಯಾರ್ಥಿಗಳು: ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು

ಕೊಪ್ಪಳ : ಶಾಲೆಗೆ ತೆರಳಲು ವಿದ್ಯಾರ್ಥಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದು, ಪ್ರಾಣದ ಹಂಗು ತೊರೆದು ಶಾಲೆಗೆ ತೆರಳುತ್ತಿದ್ದಾರೆ.

ಹೌದು ಕೊಪ್ಪಳ ತಾಲೂಕಿನ ಮಾದಿನೂರು-ಕಿನ್ನಾಳ ಗ್ರಾಮದ ವಿದ್ಯಾರ್ಥಿಗಳು ಈ ಸಂಕಷ್ಟ ಅನುಭವಿಸುತ್ತಿದ್ದು, ಹಳ್ಳದಲ್ಲಿ ಇಳಿದು ವಿದ್ಯಾರ್ಥಿಗಳು ಶಾಲೆಗೆ ತೆರಳಬೇಕು. ಮೊಣಕಾಲು ತನಕ ನೀರು ಇದ್ರೂ ವಿದ್ಯಾರ್ಥಿಗಳು ಹಳ್ಳ ದಾಟಬೇಕು. ಸೇತುವೆ ಇಲ್ಲದೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ಇನ್ನು ಹಳ್ಳದಲ್ಲಿ ಮರಳು ಮಾಫಿಯಾದಿಂದ ಇನ್ನಷ್ಟು ತಗ್ಗು ಬಿದ್ದಿದ್ದು, ಜನಪ್ರತಿನಿಧಿಗಳು ಹಾಗೂ ಮರಳು ಮಾಫಿಯಾ ನಡೆಸುವವರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
PublicNext

PublicNext

20/09/2022 06:36 pm

Cinque Terre

19.86 K

Cinque Terre

1