ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಎರಡು ಮೂಗಿನ ವಿಚಿತ್ರ ಕರು ಜನನ

ಕೊಪ್ಪಳ: ಹಸುವೊಂದು ಎರಡು ಮೂಗಿನ ವಿಚಿತ್ರ ಕರುವಿಗೆ ಜನ್ಮ ನೀಡಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮುದೇನೂರು ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಹುಸೇನಪ್ಪ ಮುದೇನೂರು ಅವರ ಮನೆಯಲ್ಲಿ ಗುರುವಾರ ನಡೆದಿದೆ.

ಈ ಕರು ಸಾಮಾನ್ಯ ಕರುವಿಗಿಂತ ಭಿನ್ನವಾಗಿದೆ. ಈ ವಿಚಿತ್ರ ಕರುವಿಗೆ ಎರಡು ಮೂಗುಗಳಿದ್ದು, ನಾಲ್ಕು ಮೂಗಿನ ಹೊಳ್ಳೆಗಳಿವೆ. ಇದು ನಾಲ್ಕು ಹೊಳ್ಳೆಗಳ ಮೂಲಕ ಉಸಿರಾಡುತ್ತಿರುವುದೇ ವಿಶೇಷ. ಕರು ಲವಲವಿಕೆಯಿಂದ ಇರುವುದೇ ಗಮನಾರ್ಹವೆನಿಸಿದೆ. ಈ ವಿಚಿತ್ರ ಕರು ನೋಡಿ ಸ್ಥಳೀಯರು ಬೆರಗಾಗಿದ್ದು, ದೈವೀ ಸ್ವರೂಪ ಎಂದು ಬಣ್ಣಿಸುತ್ತಿದ್ದಾರೆ. ಈ ಕರವನ್ನು ನೋಡಿ ಸುತ್ತಮುತ್ತಲಿನ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದಾರೆ.

ಈ ಕುರಿತು ಪಶು ವೈದ್ಯಾಧಿಕಾರಿ ಡಾ.ಚವ್ಹಾಣ್ ಅವರು ಮಾತನಾಡಿ, ನೂರಕ್ಕೆ ಒಂದರಂತೆ ಈ ರೀತಿಯ ವಿಚಿತ್ರ ಕರು ಜನಿಸುತ್ತದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶರಣಪ್ಪ ಕಳ್ಳಿ ಹನುಮಂತ ಕುರಿ ಚಂದ್ರಪ್ಪ ಮೂಲಿಮನಿ ಶಶಿಧರ್ ಹಳೆಗೌಡ್ರು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ್ ಆರ್ ಪಾಟೀಲ್ ಉಪಸ್ಥಿತರಿದ್ದರು.

Edited By : Vijay Kumar
PublicNext

PublicNext

07/10/2022 03:50 pm

Cinque Terre

12.72 K

Cinque Terre

2