ಕೊಪ್ಪಳ: ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಯುವಕರು ಹುಚ್ಚಾಟ ಮೆರೆದಿರೋ ಘಟನೆ ಕೊಪ್ಪಳ ತಾಲೂಕಿನ ಹುಲಿಗಿಯ ಬಳಿ ನಡೆದಿದೆ.ಐತಿಹಾಸಿಕ ಹುಲಿಗಿಯ ಪಕ್ಕದ ಸೇತುವೆಗೆ ಹಗ್ಗ ಕಟ್ಟಿ ಯುವಕರು ಜೀಗಿದಾಟ ನಡೆಸಿದ್ದಾರೆ. ಇಷ್ಟೇ ಅಲ್ಲದೆ ಸೇತುವೆ ಮೇಲಿಂದ ನೀರಿಗೆ ಜಿಗಿದು ಹುಚ್ಚಾಟ ನಡೆಸಿದ್ದಾರೆ.
ಜಿಂದಾಲ ಕಂಪನಿಗೆ ನೀರು ಸರಬರಾಜು ಮಾಡುವ ಪೈಪ್ ಗಳಿಗಾಗಿ ಸೇತುವೆ ನಿರ್ಮಿಸಲಾಗಿದೆ. ಇನ್ನೂ ಡ್ಯಾಂ ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ನದಿಯಲ್ಲಿ ಯಾರೂ ಇಳಿಯದಂತೆ ಸೂಚನೆಯನ್ನು ಜಿಲ್ಲಾಡಳಿತ ನೀಡಿದೆ. ಆದರೂ ಯುವಕರು ಹೀಗೆ ಮಾಡುತ್ತಿರುವುದು ಸ್ಥಳೀಯರಲ್ಲಿ ಆತಂಕ ತಂದಿದೆ.
PublicNext
04/10/2022 05:24 pm