ಕೊಪ್ಪಳ: ಜಿಲ್ಲೆಯ ಕನಕಗಿರಿಯ ಹುಲಿಹೈದರ್ ಗ್ರಾಮದಲ್ಲಿ ಪ್ರಭಾವಿ ಕಾಂಗ್ರೆಸ್ ಪ್ರಭಾವಿ ನಾಯಕೊಬ್ಬರ ಬೆಂಬಲಿಗನಿಂದ ಪೊಲೀಸರ ಮೇಲೆ ದರ್ಪ ತೋರಿದ ಘಟನೆ ಜರುಗಿದೆ.
ಹನುಮೇಶ್ ಎನ್ನುವವನು ಕುಡಿದು ರಂಪಾಟ ಮಾಡಿದ್ದು ತಾನೇ ಕಾಲುಕೆದರಿ ಪೊಲೀಸರೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ.
ಪೊಲೀಸರನ್ನೇ ಗುಂಡಾಗಿರಿ ಮಾಡ್ತೀಯಾ ಅಂತಾ ಅವಾಚ್ಯ ಪದಗಳಿಂದ ಹನುಮೇಶ ನಿಂದನೆ ಮಾಡಿದ್ದು, ಪೊಲೀಸರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾನೆ.
ಗಲಾಟೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಪೊಲೀಸರಿಗೆ ದರ್ಪ ತೋರಿದ ಹನುಮೇಶ್ ಲಾಡ್ಜಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಹನುಮೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
PublicNext
25/09/2022 10:30 pm