ಕೊಪ್ಪಳ : ಪಿಎಫ್ಐ ಸೇರಿ 8 ಸಂಘಟನೆಗಳ ನಿಷೇಧ ಹಿನ್ನೆಲೆಯಲ್ಲಿ ಕೊಪ್ಪಳ ಹಾಗೂ ಗಂಗಾವತಿಯಲ್ಲಿ ಪಿಎಫ್ಐ ಮುಖಂಡರ ಮನೆಯ ಮೇಲೆ ತಹಶೀಲ್ದಾರ್, ಪೊಲೀಸರಿಂದ ದಾಳಿ ನಡೆದಿದೆ. ಕೊಪ್ಪಳದ ಪಿಎಫ್ಐ ತಾಲೂಕಾ ಅಧ್ಯಕ್ಷ ಅಬ್ದುಲ್ ಖಯ್ಯೂಮ್,
ಬಂಧಿತ ಸರ್ಪರಾಜ್, ರಸೂಲ್, ಚಾಂದ್ ಸಲ್ಮಾನ ಮನೆಯ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಲಾಗಿದೆ.
ಗಂಗಾವತಿಯ ಭೈರೂನ್ ಮಸೀದಿಯ ಬಳಿಯ ಸಭೆ ನಡೆಸುತ್ತಿದ್ದ ಸ್ಥಳ ಪರಿಶೀಲನೆ ನಡೆಸಿದ್ದು, ತಪಾಸಣೆಯ ವೇಳೆ ಯಾವುದೇ ವಸ್ತುಗಳು ದೊರೆತಿಲ್ಲ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿಯವರಿಂದ ಮಾಹಿತಿ ನೀಡಿದ್ದಾರೆ.
Kshetra Samachara
29/09/2022 11:01 am