ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ : ಹಂದಿಗಳ ಕಾಟ : ಮೆಕ್ಕೆಜೋಳ ಬೆಳೆ ನಾಶ

ಕೊಪ್ಪಳ : ಇಷ್ಟು ದಿನ ಮಳೆಯಿಂದ ಕಂಗಾಲಾದ ರೈತನಿಗೆ ಈಗ ಹಂದಿಗಳ ಕಾಟ ಶುರುವಾಗಿದೆ. ಹೌದು ಮೆಕ್ಕೆಜೋಳ ಹೊಲಕ್ಕೆ ನುಗ್ಗುತ್ತಿರುವ ಹಂದಿಗಳು ಬೆಳೆಯನ್ನು ಸಂಪೂರ್ಣ ನಾಶ ಮಾಡುತ್ತಿವೆ.

ಕೊಪ್ಪಳದ ಬಹದ್ದೂರು ಬಂಡಿ ಗ್ರಾಮದ ರೈತರು ಬೆಳೆದಿದ್ದ ಮೆಕ್ಕೆಜೋಳವನ್ನು ಹಂದಿಗಳು ತಿಂದು ಹಾಳು ಮಾಡುತ್ತಿದ್ದು,ಹಂದಿಗಳ ಕಾಟಕ್ಕೆ ವಿಷ ಕುಡಿಯುವುದಾಗಿ ರೈತರು ಅಳಲು ತೋಡಿಕೊಂಡಿದ್ದಾರೆ.

ಇನ್ನೂ ನಗರದಿಂದ ಹಂದಿಗಳನ್ನು ಗ್ರಾಮದ ಹೊರಗಡೆ ಬಿಟ್ಟ ಹಿನ್ನೆಲೆ ಬೆಳೆ ನಾಶವಾಗುತ್ತಿದ್ದು, ಹಂದಿಗಳಿಂದ ಮುಕ್ತಿ ನೀಡುವಂತೆ ರೈತರು ಮನವಿ ಮಾಡಿದ್ದಾರೆ. ರೈತರಾದ ಶರಣಪ್ಪ ಕುರಿ, ಬಾಬುಸಾಬ, ಫಕೀರಶೆಟ್ಟಪ್ಪ ಇನ್ನಿತರ ರೈತರ ಹೊಲದಲ್ಲಿ ಹಂದಿ ಹಾವಳಿಯಿಂದ ಮೆಕ್ಕೆಜೋಳ ನಾಶವಾಗಿದೆ.

Edited By : Nagesh Gaonkar
PublicNext

PublicNext

26/09/2022 11:59 am

Cinque Terre

23.54 K

Cinque Terre

0