ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ದೇವರ ಉತ್ಸವದ ಕೋಲು ಮುಟ್ಟಿದ್ದಕ್ಕೆ ದಲಿತ ಕುಟುಂಬದ ಮೇಲೆ ದೌರ್ಜನ್ಯ

ವರದಿ : ರವಿ ಕುಮಾರ್, ಕೋಲಾರ.

ಕೋಲಾರ : ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಟೇಕಲ್ ಹೋಬಳಿ ಹುಳ್ಳೆರಹಳ್ಳಿ ಗ್ರಾಮದಲ್ಲಿ ದಲಿತ ಕುಟುಂಬದ ಮೇಲೆ 60 ಸಾವಿರ ದಂಡ ಮತ್ತು ಗ್ರಾಮದಿಂದ ದಲಿತ ಕುಟುಂಬವನ್ನು ಖಾಲಿ ಮಾಡಲು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

ಕಳೆದ ಮೂರು ದಿನಗಳ ಹಿಂದೆ ಗ್ರಾಮದಲ್ಲಿ ಗ್ರಾಮ ದೇವತೆ ಮೆರವಣಿಗೆಯಲ್ಲಿ ಚೇತನ್ ಎಂಬ 10 ನೇ ತರಗತಿ ವಿದ್ಯಾರ್ಥಿ ದೇವರನ್ನು ಮುಟ್ಟಿದ ಕಾರಣಕ್ಕೆ ನೀವು ದಲಿತರು ದೇವರನ್ನು ಮುಟ್ಟಬಾರದು. ಮುಟ್ಟಿದ ತಪ್ಪಿಗೆ ಶಿಕ್ಷೆಯಾಗಿ 60 ಸಾವಿರ ದಂಡ 1 ನೇ ತಾರೀಕಿನೊಳಗಡೆ ಕಟ್ಟಬೇಕು. ಇಲ್ಲ ಅಂದರೆ ಊರಿನಿಂದ ಬಹಿಷ್ಕಾರ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಕೇಳಿಬಂದಿದೆ.

Edited By :
PublicNext

PublicNext

21/09/2022 04:23 pm

Cinque Terre

22.84 K

Cinque Terre

0