", "articleSection": "Others", "image": { "@type": "ImageObject", "url": "https://prod.cdn.publicnext.com/s3fs-public/28305320250111065549filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Pavan Kolar" }, "editor": { "@type": "Person", "name": "8861034066" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕೋಲಾರ - ಯುವಕರು ಒಳ್ಳೆಯ ಕನಸುಗಳನ್ನು ಕಂಡು ಶ್ರಮವಹಿಸಿ ಯಶಸ್ಸು ಕಾಣಬೇಕು. ಆ ಮೂಲಕ ಜನಸಾಮಾನ್ಯರಿಗೆ ಸ್ಪಂದಿಸುವ ಅಧಿಕಾರಿಗಳಾಗಿ ಸೇವೆ ಸಲ್ಲ...Read more" } ", "keywords": "Node,Kolar,Others", "url": "https://publicnext.com/article/nid/Kolar/Others" } ಕೋಲಾರ - ಒಳ್ಳೆಯ ಅಧಿಕಾರಿಗಳಾಗಲು ಸೇವಾ ಮನೋಭಾವನೆ ಇರಬೇಕು - ಅಪರ ಜಿಲ್ಲಾಧಿಕಾರಿ ಮಂಗಳ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - ಒಳ್ಳೆಯ ಅಧಿಕಾರಿಗಳಾಗಲು ಸೇವಾ ಮನೋಭಾವನೆ ಇರಬೇಕು - ಅಪರ ಜಿಲ್ಲಾಧಿಕಾರಿ ಮಂಗಳ

ಕೋಲಾರ - ಯುವಕರು ಒಳ್ಳೆಯ ಕನಸುಗಳನ್ನು ಕಂಡು ಶ್ರಮವಹಿಸಿ ಯಶಸ್ಸು ಕಾಣಬೇಕು. ಆ ಮೂಲಕ ಜನಸಾಮಾನ್ಯರಿಗೆ ಸ್ಪಂದಿಸುವ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ತಿಳಿಸಿದರು.

ನಗರ ಹೊರವಲಯದ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕøತಿಕ ಕೇಂದ್ರದಲ್ಲಿ ಕ್ರಿಸ್ತು ಜಯಂತಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಳ್ಳೆಯ ಅಧಿಕಾರಿಗಳಾಗಲು ಸೇವಾ ಮನೋಭಾವನೆ ಇರಬೇಕು, ಸಹಾಯ ಮಾಡುವ ಹಾಗೂ ಜನಸಾಮಾನ್ಯರಿಗೆ ಸ್ಪಂದಿಸುವ ಮನಸ್ಸಿರಬೇಕು ಎಂದರು. ಕೋಲಾರ ಜಿಲ್ಲೆ ಬರಪೀಡಿತ ಹಾಗು ಸತತ ಪ್ರಕೃತಿ ವಿಕೋಪಕ್ಕೆ ಒಳಗಾಗುವ ಜಿಲ್ಲೆಯಾಗಿದೆ. ಆದರೆ ಇಲ್ಲಿನ ಜನರು ಸಮಸ್ಯೆಗಳನ್ನು ಎದುರಿಸುವಂತಹ ಹಾಗೂ ಶ್ರಮದ ಮೇಲೆ ನಂಬಿಕೆ ಉಳ್ಳವರಾಗಿದ್ದಾರೆ. ಹಾಗಾಗಿ ಏನೇ ಕಷ್ಟ ಬಂದರೂ ಅದನ್ನು ನಿಭಾಯಿಸುವ ಶಕ್ತಿ ಉಳ್ಳವರಾಗಿದ್ದಾರೆ. ಯುವಕರು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದರೆ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Edited By : PublicNext Desk
Kshetra Samachara

Kshetra Samachara

11/01/2025 06:56 pm

Cinque Terre

200

Cinque Terre

0