ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಅಕ್ರಮ ಭೂ ಮಂಜೂರಾತಿ - ತಹಶೀಲ್ದಾರ್ ಸುಜಾತ ಸೇರಿದಂತೆ ಅಧಿಕಾರಿಗಳ ಅಮಾನತಿಗೆ ಒತ್ತಾಯ

ಕೋಲಾರ : ಅನರ್ಹ ಫಲಾನುಭವಿಗಳಿಗೆ ಅಕ್ರಮವಾಗಿ ಸರ್ಕಾರಿ ಜಮೀನು ಮಂಜೂರು ಮಾಡಿರುವ ಆರೋಪದಡಿ ಕೋಲಾರ ಲೋಕಾಯುಕ್ತದಲ್ಲಿ ಬಂಗಾರಪೇಟೆ ತಹಶೀಲ್ದಾರ್ ಸುಜಾತ ಸೇರಿದಂತೆ ಇಬ್ಬರು ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿದೆ.

ಅಂತಹ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಕೆಜಿಎಫ್ ತಾಲ್ಲೂಕಿನ ಸುಂದ್ರಪಾಳ್ಯ ಗ್ರಾಮದ ವೆಂಕಟರಾಮಪ್ಪ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಅವರು 2017 ರಲ್ಲಿ ನಾನು ಬಗರ್ ಹುಕ್ಕುಂ ಸಾಗುವಳಿ ಜಮೀನು ಸಕ್ರಮೀಕರಣ ಸಮಿತಿ ಸದಸ್ಯನಾಗಿದ್ದು ಮಾಜಿ ಶಾಸಕಿ ವೈ ರಾಮಕ್ಕ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಮೂರು ಸಭೆಗಳಲ್ಲಿ ಸರ್ಕಾರಿ ಜಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿಕೊಂಡಿರುವ ಫಲಾನುಭವಿಗಳ ಅರ್ಜಿಗಳ ಕುರಿತು ನಿರ್ಣಯ ಕೈಗೊಂಡಿರುವುದಿಲ್ಲ ಎಂದು ವಿವರಿಸಿದರು. ‌

ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 2017 ರಲ್ಲಿ ಬಗರ್ ಹುಕ್ಕುಂ ಸಾಗುವಳಿ ಜಮೀನು ಸಕ್ರಮೀಕರಣ ಸಮಿತಿ ಸಭೆಯಲ್ಲಿ ಅರ್ಹ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡುವ ಸಲುವಾಗಿ ಸಭೆಯಲ್ಲಿ ಯಾವುದೇ ತೀರ್ಮಾನಗಳನ್ನು ಕೈಗೊಳ್ಳದಿದ್ದರೂ ೨೨೩ ಅನರ್ಹ ಫಲಾನುಭವಿಗಳಿಗೆ ಅಕ್ರಮವಾಗಿ ಸಾಗುವಳಿ ಚೀಟಿ ನೀಡುವ ಮೂಲಕ ಸರ್ಕಾರಕ್ಕೆ 523 ಎಕರೆ ಜಮೀನು ವಂಚನೆ ಮಾಡಿರುವ ಕುರಿತು ಲೋಕಾಯುಕ್ತ ಕಛೇರಯಲ್ಲಿ ಸಾಮಾಜಿಕ ಕಾರ್ಯಕರ್ತ ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೋಲೀಸರು ತನಿಖೆ ಕೈಗೊಂಡಿದ್ದರು. ದರಕಾಸ್ತು ಕಮಿಟಿ ಸದಸ್ಯನಾಗಿದ್ದ ನನಗೂ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.

ಎಂದು ತಿಳಿಸಿದರು.

Edited By : PublicNext Desk
PublicNext

PublicNext

11/01/2025 01:29 pm

Cinque Terre

23 K

Cinque Terre

0

ಸಂಬಂಧಿತ ಸುದ್ದಿ