ಬೆಂಗಳೂರು: 'ಹಲವು ಕಂಪನಿಗಳು ಜಾರಿಗೆ ತಂದಿರುವ ವರ್ಕ್ ಫ್ರಮ್ ಹೋಮ್ ಸಂಸ್ಕೃತಿಯು ಬೆಂಗಳೂರಿನಲ್ಲಿ ಉದ್ಯೋಗದ ಮೇಲೆ ಪರಿಣಾಮ ಬೀರಿದೆ' ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದ್ದಾರೆ.
ವಿಧಾನ ಪರಿಷತ್ ಅಧಿವೇಶದಲ್ಲಿ ಇಂದು ಉದ್ಯೋಗದ ವಿಚಾರವನ್ನು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶ್ವಥ್ ನಾರಾಯಣ, ಬೆಂಗಳೂರಿನ ಕಂಪನಿಗಳು ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಕೈಬಿಡುವ ಅಗತ್ಯವಿದೆ ಎಂದು ತಿಳಿಸಿದರು.
ಕೆಲ ದಿನಗಳ ಹಿಂದೆ ಬಿಜೆಪಿ ಸಂಸದ ಪಿಸಿ ಮೋಹನ್ ಕೂಡ ಉದ್ಯೋಗದ ಕುಸಿತಕ್ಕೆ 'ವರ್ಕ್ ಫ್ರಮ್ ಹೋಮ್' ಒಂದು ಅಂಶವೆಂದು ಉಲ್ಲೇಖಿಸಿದ್ದರು.
PublicNext
15/09/2021 03:30 pm